Friday, April 4, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಗ್ರಾಮೀಣ ಪತ್ರಕರ್ತರನ್ನು ಪ್ರೋತ್ಸಾಹಿಸಲು ಪ್ರಶಸ್ತಿಗಳಿಗೆ ಆಯ್ಕೆ

ಕೆ.ಆರ್.ನಗರ:ಗ್ರಾಮೀಣ ಪತ್ರಕರ್ತರನ್ನು ಪ್ರೋತ್ಸಾಹಿಸಲು ಪ್ರಶಸ್ತಿಗಳಿಗೆ ಆಯ್ಕೆ

ಕೆ ಆರ್ ನಗರ ತಾಲೂಕು ಪತ್ರಕರ್ತರ ಸಂಘದಿಂದ ಕೊಡ ಮಾಡುವ ಪ್ರಶಸ್ತಿಗೆ ಹುಣಸೂರು ವಿಜಯವಾಣಿ ವರದಿಗಾರ ಶಿವಕುಮಾರ್ ವಿ.ರಾವ್ ಮತ್ತು ಹೆಚ್.ಡಿ.ಕೋಟೆ ಆಂದೋಲನ ವರದಿಗಾರ ಮಂಜು ಕೋಟೆ ಆಯ್ಕೆ

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಗ್ರಾಮೀಣ ಪತ್ರಕರ್ತರನ್ನು ಪ್ರೋತ್ಸಾಹಿಸಲು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ ಎರಡು ಪ್ರಶಸ್ತಿಗಳಿಗೆ ಹುಣಸೂರು ವಿಜಯವಾಣಿ ವರದಿಗಾರ ಶಿವಕುಮಾರ್ ವಿ.ರಾವ್ ಮತ್ತು ಹೆಚ್.ಡಿ.ಕೋಟೆ ಆಂದೋಲನ ವರದಿಗಾರ ಮಂಜು ಕೋಟೆ ಆಯ್ಕೆಯಾಗಿದ್ದಾರೆ.

ಸಾಲಿಗ್ರಾಮದ ಪ್ರಜಾವಾಣಿ ವರದಿಗಾರ ಯಶ್ವಂತ್ ತಮ್ಮ ತಂದೆ ಎಸ್.ಎಂ.ರಾಮಕೃಷ್ಣಯ್ಯ ಸ್ಮರಣಾರ್ಥ ಅವರ ಹೆಸರಿನಲ್ಲಿ ಆರಂಭಿಸಿರುವ ಕೃಷಿ ಮತ್ತು ರೈತ ಯಶೋಗಾಥೆ ಲೇಖನಕ್ಕೆ ಶಿವಕುಮಾರ್ ವಿ.ರಾವ್ ಹಾಗೂ ಹೊಸೂರು ಪ್ರಜಾನುಡಿ ಹಾಗೂ ಪ್ರತಿನಿಧಿ ಪತ್ರಿಕೆಗಳ ವರದಿಗಾರ ವಿನಯ್ ದೊಡ್ಡಕೊಪ್ಪಲು ತಮ್ಮ ತಂದೆ ಜಿಲ್ಲಾ ಪರಿಷತ್ ಮಾಜಿ ಸದಸ್ಯರಾದ ಡಿ.ಎಸ್. ಜಗದೀಶ್ ಸ್ಮರಣಾರ್ಥ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸಾಮಾಜಿಕ ಕಳಕಳಿಯ ಲೇಖನಕ್ಕೆ ಮಂಜುಕೋಟೆ ಆಯ್ಕೆಯಾಗಿದ್ದಾರೆ.

ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದಿಂದ ಜು,28 ಶುಕ್ರವಾರ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.

ಎಂ.ಎಸ್.ರವಿಕುಮಾರ್.
ಪ್ರಧಾನ ಕಾರ್ಯದರ್ಶಿ.
ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘ
RELATED ARTICLES
- Advertisment -
Google search engine

Most Popular