ಕೆ.ಆರ್.ನಗರ: ತಾಲೂಕಿನ ಡಿ.ಕೆ.ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಚುನಾಯಿತರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಸ್.ರವಿ ಕರ್ತವ್ಯ ನಿರ್ವಹಿಸಿದರು.
ಸಾಮಾನ್ಯ ವರ್ಗದಿಂದ ಕೆ.ಎಸ್.ರವಿಕುಮಾರ್ (೧೩೫), ಕೆ.ಆರ್.ನಟರಾಜ(೧೨೭), ಡಿ.ಪಿ.ನಾಗೇಂದ್ರ(೧೧೮), ಕೆ.ಬಲಕೃಷ್ಣ(೧೧೧), ಕೆ.ವಿ.ಕೃಷ್ಣೇಗೌಡ(೧೦೯), ಅಶೋಕ್ ಕುಮಾರ್(೮೭), ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ದಿಸಿದ್ದ ರತ್ನಮ್ಮ(೧೧೩), ಸರಸ್ವತಿ(೧೦೫), ಹಿಂದುಳಿದ ವರ್ಗ ಎ ಯಿಂದ ಸ್ಪರ್ದಿಸಿದ್ದ ತಾಯಮ್ಮ(೧೪೧), ಹಿಂದುಳಿದ ವರ್ಗ ಬಿ ಕೆ.ಎಸ್.ವಿಶ್ವನಾಥ್(೧೨೫), ಪರಿಶಿಷ್ಟ ಜಾತಿ ಮೀಸಲಾತಿಯಿಂದ ಮುತ್ತಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬೆಳಗ್ಗೆ ೯ ರಿಂದ ೩ ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ೫ ಮಂದಿ ಹೊರತು ಪಡಿಸಿ ಉಳಿದ ಎಲ್ಲಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಆನಂತರ ನಡೆದ ಮತ ಎಣಿಕೆಯಲ್ಲಿ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದ ಇವರುಗಳನ್ನು ಗ್ರಾಮದ ಮುಖಂಡರಾದ ಸಿ.ಚಂದ್ರ, ಸಂತೋಷ್, ತಮ್ಮಣ್ಣೇಗೌಡ, ಈರಣ್ಣಯ್ಯ, ರಾಮಚಂದ್ರ, ರವಿಕುಮಾರ್, ರಾಜೇಂದ್ರ, ಗೋವಿಂದಯ್ಯ, ಮಂಜುನಾಥ್ ಮತ್ತಿತರರು ಅಭಿನಂದಿಸಿದರು.