ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಭತ್ತ ,ರಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ನವಂಬರ್ ಹತ್ತರೊಳಗೆ ನೋಂದಣಿ ಪ್ರಾರಂಭವಾದರೆ ರೈತರಿಗೆ ಅನುಕೂಲವಾಗುತ್ತದೆ. ಈ ಕೂಡಲೇ ಭತ್ತ,ರಾಗಿ ಬೆಳದಿರುವ ರೈತರ ನೋಂದಣಿ ಪ್ರಾರಂಭಿಸಿಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಶಾಖೆ ವತಿಯಿಂದ ಪಟ್ಟಣದ ತಾಲ್ಲೂಕು ಆಡಳಿತ ಸೌದದ ಕಚೇರಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಅವರ ನೇತೃತ್ವದಲ್ಲಿ ರೈತ ಸಂಘಟನೆಯವರೊಂದಿಗೆ ಹಕ್ಕೊತ್ತಾಯ ಪತ್ರ ನೀಡಲಾಯಿತು.
ಬಳಿಕ ಮಾಧ್ಯಮರೊಂದಿಗೆ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ ಈವರೆಗೂ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಹಾಗೂ ಬೆಂಬಲ ಬೆಲೆ ನಿಗದಿಪಡಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಒಬ್ಬ ರೈತನಿಂದ ಇಂತಿಷ್ಟೇ ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಬೇಕು ಎಂದು ಮಿತಿಯನ್ನು ಮಾಡ ಬಾರದು ಹಾಗೂ. ಇನ್ನು ನೋಂದಣಿ ಪ್ರಕ್ರಿಯೆಗೆ ಸಿದ್ದತೆಗಳೇ ನಡೆದಿಲ್ಕ ಯಾವಾಗ ಪ್ರಾರಂಭ ಆಗುತ್ತದೆ ಎನ್ನುವುದನ್ನು ಖಾತ್ರಿಪಡಿಸಿಲ್ಲ. ಇದರಿಂದ ರೈತಾಪಿ ವರ್ಗ ತುಂಬಾ ಆತಂಕಕ್ಕೀಡಾಗಿದ್ದಾರೆ, ಕೂಡಲೇ ಸರ್ಅಕರದ ಪರವಾಗಿ ಕೃಷಿ ಸಚಿವರು ಮಧ್ಯಪ್ರವೇಶ ಮಾಡಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ ರೈತರ ಸಭೆ ಮಾಡಲಿ : ಭತ್ತ ಮತ್ತು ರಾಗಿ ಕಟಾವು ಮಾಡುವ ಯಂತ್ರದ ಬಗ್ಗೆ ರೈತರ ಸಭೆ ಕರೆದು ಜಿಲ್ಲಾಮಟ್ಟದಲ್ಲಿ ಚರ್ಚೆ ಮಾಡಿ ಒಂದು ಗಂಟೆಗೆ ಎಷ್ಟು ಮೊತ್ತ ಎಂದು ನಿಗದಿಯಾಗಬೇಕು.ಆದ್ದರಿಂದ ಜಿಲ್ಲಾಡಳಿತ ಕೂಡಲೇ ರೈತರ ಸಭೆ ಕರೆಯ ಬೇಕು ಎಂದು ಒತ್ತಾಯಿಸಿದ ಅವರುಗಳು ಕೇಂದ್ರ ಸರ್ಕಾರ ಎಂಎಸ್‌ಪಿ ಯನ್ನು ಪ್ರತಿ ಕ್ವಿಂಟಲ್ ಭತ್ತಕ್ಕೆ 2300 ರೂ ನಿಗದಿ ಮಾಡಿದ್ದು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಾಲಿಗೆ 500 ರೂ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಭೂಮಿಯನ್ನು ವಾಕ್ಸ್, ಬೋರ್ಡಿಗೆ ಸೇರಿದ್ದು ಎಂದು ಪರಿಗಣಿಸದೆ ನ್ಯಾಯ ಬದ್ಧವಾಗಿ ರೈತರಿಗೆ ಭೂಮಿ ಸಿಗುವಂತೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು.
ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಿರಿ :ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ಡಿಸೆಂಬರ್ ಒಂದನೇ ತಾರೀಖಿನಿಂದ ಪ್ರಾರಂಭ ಮಾಡಬೇಕು. ಹಾಗೂ ಯಾವುದೇ ಶರತ್ತು ನಿಬಂಧನೆಗಳು ಇಲ್ಲದ ಭತ್ತವನ್ನು ರೈತರಿಂದ ಖರೀದಿ ಮಾಡಬೇಕು ಹಾಗೂ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕು ಹಕ್ಕೊತ್ತಾಯ ಮಾಡಿದರು.
ಎಳನೀರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ಎಳೆನೀರಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ರೈತರಿಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲ ಕಾರಣ ಎಪಿಎಂಸಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ರೈತರ ಪರ ಕೆಲಸ ಮಾಡುತ್ತಿಲ್ಲ ಮತ್ತು ಮಧ್ಯವರ್ತಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರುಗಳು ಎಳೆನೀರು ಹೊರ ರಾಜ್ಯಗಳಲ್ಲಿ ಅಪಾರವಾದ ಬೇಡಿಕೆ ಇದೆ ಇದರಿಂದ ರೈತರಿಗೆ ಮೋಸವಾಗುತ್ತಿದೆ ಕಾರಣ ಮಧ್ಯವರ್ತಿಗಳು ಇದರ ಲಾಭಾಂಶವನ್ನು ಪಡೆಯುತ್ತಿದ್ದಾರೆ. ಇದಕ್ಕೆ ಸೂಕ್ತವಾದ ಮಾರುಕಟ್ಟೆ ಇಲ್ಲ ಸೂಕ್ತವಾದ ಒಳ್ಳೆಯ ಅಧಿಕಾರಿ ಇಲ್ಲದ ಕಾರಣ ರೈತರಿಗೆ ಬೆಲೆ ಗೊತ್ತಾಗುತ್ತಿಲ್ಲ.ತೆಂಗಿನ ಕಾಯಿ ಮಾರುಕಟ್ಟೆಯಲ್ಲೂ ಇದೆ ರೀತಿಯಲ್ಲಿ ಬೆಲೆ ಗೊತ್ತಾಗುತ್ತಿಲ್ಲ ಉದಾಹರಣೆಗೆ ಸಾಲಿಗ್ರಾಮ ತಾಲೂಕಿನ ಶನಿವಾರ ಸಂತೆಯಲ್ಲಿ ಸಂತೆಮಾಳ ಇದ್ದರೂ ರಸ್ತೆ ಬದಿಯಲ್ಲಿ, ದೇವಸ್ಥಾನ ಹತ್ತಿರ ಸೇರಿದಂತೆ ಅನೇಕ ಕಡೆಗಳಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಲಾಗುತ್ತದೆ, ಈ ರೀತಿಯ ವ್ಯಾಪಾರ ಮಾಡಲು ಅಧಿಕಾರಿಗಳು ಕಾರಣರಾಗಿದ್ದಾರೆ ಹಾಗೂ ತಾಲ್ಲೂಕು ಆಡಳಿತ ವೈಪಲ್ಯ ಎಂದು ದೂರಿದರು.ಈ ಕೂಡಲೇ ಎಳನೀರು ಮತ್ತು ತೆಂಗಿನಕಾಯಿ ವ್ಯಾಪಾರ ಮಾಡಲು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ಪ್ರಾರಂಬಿಸಿ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಕಾರ್ಯಾದ್ತಕ್ಷ ಜಲೇಂದ್ರ, ತಾ.ಕಾರ್ಯದರ್ಶಿ ತಿಪ್ಪೂರು ಲೋಕೇಶ್, ಗೌಎವಾಧ್ಯಕ್ಷ ಕಾಳೇಗೌಡ ಪದಾಧಿಕಾರಿಗಳಾದ ರಾಜನಾಯಕ, ವಿಜಯಕುಮಾರ್,ಜಯರಾಮೇಗೌಡ, ರವಿ, ಮಧುಸೂದನ್, ಪ್ರದೀಪ, ರಮೇಶ್, ಸುದರ್ಶನ್, ಜಲೇಂದ್ರ, ಎಸ್.ಕೀರ್ತಿ ಮೊದಲಾದವರು ಇದ್ದರು.