Friday, April 18, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಪುರಸಭೆಯ ಅಧ್ಯಕ್ಷರಾಗಿ ಶಿವುನಾಯಕ್ , ಉಪಾಧ್ಯಕ್ಷೆಯಾಗಿ ವಸಂತಮ್ಮಕೃಷ್ಣೇಗೌಡ ಆಯ್ಕೆ

ಕೆ.ಆರ್.ನಗರ: ಪುರಸಭೆಯ ಅಧ್ಯಕ್ಷರಾಗಿ ಶಿವುನಾಯಕ್ , ಉಪಾಧ್ಯಕ್ಷೆಯಾಗಿ ವಸಂತಮ್ಮಕೃಷ್ಣೇಗೌಡ ಆಯ್ಕೆ

ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಶಿವುನಾಯಕ್ ಮತ್ತು ಉಪಾಧ್ಯಕ್ಷೆಯಾಗಿ ವಸಂತಮ್ಮಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ
ನಡೆದ ಚುನಾವಣೆಯಲ್ಲಿ ಇವರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಕಾರಣ
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಇವರ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವುನಾಯಕ್ ಮಾತನಾಡಿ ಪಕ್ಷ ನನಗೆ ವಹಿಸಿರುವ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡುವ ಮೂಲಕ ಶಾಸಕರು ಮತ್ತು ಸರ್ಕಾರಕ್ಕೆ ಹೆಸರು ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದಾಗಿ ಇದರೊಂದಿಗೆ ನಮ್ಮ ಪಕ್ಷದ ಸರ್ಕಾರ
ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಶಾಸಕ ಮೂಲಕ ಹೆಚ್ಚು ಅನುದಾನ ತಂದು ಅವರ ಮಾರ್ಗದರ್ಶನದಲ್ಲಿ ಎಲ್ಲಾ ೨೩ ವಾರ್ಡುಗಳಿಗೂ ಸಮಾನವಾಗಿ ಹಣ ಹಂಚಿಕೆ ಮಾಡಿ ಜನ ಸಾಮಾನ್ಯರ ಆಶಯಕ್ಕೆ ತಕ್ಕಂತೆ ನನ್ನ ಹುದ್ದೆಯನ್ನು ನಿಭಾಯಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಡಿ.ರವಿಶಂಕರ್
ಹಾಗೂ ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡರ ಪರ ಜಯಕಾರದ ಘೋಷಣೆ ಮೊಳಗಿಸಿ ವಿಜಿಯೋತ್ಸವ ಆಚರಿಸಿದರು.

ಚುನಾವಣಾ ಸಭೆಯಲ್ಲಿ ಪಲ್ಲವಿಆನಂದ್, ಕೋಳಿಪ್ರಕಾಶ್, ಕೆ.ಎಲ್.ಜಗದೀಶ್, ಅಶ್ವಿನಿಪುಟ್ಟರಾಜು, ಶಂಕರ್, ಶಾರದಾನಾಗೇಶ್, ಸಂತೋಷ್‌ಗೌಡ, ಉಮೇಶ್, ಕೆ.ಜಿ.ಸುಬ್ರಮಣ್ಯ, ಶಂಕರಸ್ವಾಮಿ, ಅಪ್ರೋಜ್‌ಉನ್ನೀಸಾ,
ಸೈಯದ್‌ಸಿದ್ದಿಕ್, ಜಾವಿದ್‌ಪಾಷಾ, ಸೌಮ್ಯಲೋಕೇಶ್, ಸರೋಜಮಹದೇವ್, ನಟರಾಜು, ಕೆ.ಪಿ.ಪ್ರಭುಶಂಕರ್,
ವೀಣಾವೃಷಬೇಂದ್ರ, ಮಂಜುಳಚಿಕ್ಕವೀರು, ತೋಂಟದಾರ್ಯ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್
ಹಾಜರಿದ್ದರು.

ಆನಂತರ ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೋಡ್ಡಸ್ವಾಮೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ತಾಲೂಕು ಶರಣ ಸಾಹಿತ್ಯ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಜಿ.ಎಂ.ಹೇಮ0ತ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ಜಿ.ಎಸ್.ವೆಂಕಟೇಶ್, ಎಸ್.ಭಾಸ್ಕರ್, ವೈ.ಎಸ್.ಜಯಂತ್, ಯೋಗೀಶ್, ಚೌಕಹಳ್ಳಿಶಿವಯ್ಯ, ಭೈರನಾಯಕ,
ಗೌತಮ್‌ಜಾಧವ್, ಕೆಂಚಿಮOಜು, ಎಂ.ಎಸ್.ಅನ0ತು ಸೇರಿದಂತೆ ಹಲವು ಮುಖಂಡರು ಮತ್ತು ಪಕ್ಷದ
ಕಾರ್ಯಕರ್ತರು ಪುರಸಭೆಯ ನೂತನ ವರಿಷ್ಠರನ್ನು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular