Friday, April 18, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಸೀತಾ ಕಲ್ಯಾಣ ಕಾರ್ಯಕ್ರಮ

ಕೆ.ಆರ್.ನಗರ: ಸೀತಾ ಕಲ್ಯಾಣ ಕಾರ್ಯಕ್ರಮ

ಜ ೧೬ ಇತಿಹಾಸ ಪ್ರಸಿದ್ದ ಶ್ರೀರಾಮದೇವರ ಬ್ರಹ್ಮ ರಥೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸಿಂಗಾರದ ಗೊಂಡ ಪಲ್ಲಕ್ಕಿಯಲ್ಲಿ ವರನ ಅದ್ದೂರಿ ಮೆರವಣಿಗೆ..ಕಾಶಿ ಯಾತ್ರೆಯಲ್ಲಿ ಮಿಂದೆದ್ದ ಕೋದಂಡ …ಮಂತ್ರಘೋಷದ ನಡುವೆ ಅದ್ದೂರಿ ಮಂಟಪಕ್ಕೆ ಬಂದ ವಧು-ವರರು…ಇಬ್ಬರ ಕಡೆಯಿಂದಲೂ ಬಂದಿರುವ ಅಪಾರ ಜನಸ್ತೋಮ … ವಧುವಿಗೆ ತಾಳಿಹಾಕಿದಾಗ ಚಪ್ಪಾಳೆಯ‌ ಜಯಘೋಷ …ಅದ್ದೂರಿ ಕಲ್ಯಾಣೋತ್ಸೋವ ಕಂಡು ಪುಳಕಿತರಾದ ಭಕ್ತಾಧಿಗಳು ..ಮದುವೆಗೆ ಸಾಕ್ಷಿಯಾದ ಶಾಸಕ- ದಂಡಾಧಿಕಾರಿ-ವೈದ್ಯ
ಯಾವ ಮದುವೆ, ಇಷ್ಟೊಂದು ಅದ್ದೂರಿ ಮದುವೆ, ಇದು ಎಲ್ಲಿ ನಡೆಯಿತು? ಎಂದು ಅಚ್ಚರಿ ಪಡಬೇಡಿ!

ಇದು ಚುಂಚನಕಟ್ಟೆಯಲ್ಲಿ ಜ ೧೬ ರ ಮಂಗಳವಾರ ನಡೆಯುವ ಇತಿಹಾಸ ಪ್ರಸಿದ್ದ ಶ್ರೀರಾಮದೇವರ ಬ್ರಹ್ಮ ರಥೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಸೀತಾ ಕಲ್ಯಾಣ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ರಾತ್ರಿ 7.30 ರಿಂದಲೇ ಆರಂಭಗೊಂಡ ಮದುವೆ ಕಾರ್ಯಕ್ರಮಗಳು ನಿಜ ಮದುವೆಗಳು ನಡೆಯುವಂತೆ ರಾಮದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಸುತ್ತ ಕೂರಿಸಿ ವಾಧ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಕಾಶಿಯಾತ್ರೆ ಮಾಡಿಸಿ ಕರೆತರಲಾಯಿತು.
ನಂತರ ಮನೆದುಂಬಿಸಿಕೊಳ್ಳುವ ಶಾಸ್ತ್ರವನ್ನು ಶಾಸಕ ಡಿ.ರವಿಶಂಕರ್, ಇವರ ಪತ್ನಿ ಸುನಿತಾ ಮತ್ತು ತಹಸೀಲ್ದಾರ್ ಪೂರ್ಣಿಮಾ,ಪತಿ ರಮೇಶ್ ಹಾಗು ಕುಪ್ಪೆ ಗ್ರಾಮವರಾದ ದಾವಣಗೆರೆಯಲ್ಲಿ ನೇತ್ರತಜ್ಞರಾಗಿರುವ ಶ್ರೀನಿವಾಸ್‌ಮೂರ್ತಿ ಅವರ ಕುಟುಂಬ ವರ್ಗ ನೇರವೇರಿಸಿದರು.

ದೇವಾಲಯದ ಪ್ರಾಂಗಣದಲ್ಲಿ ಹಾಕಲಾಗಿದ್ದ ವಿದ್ಯುತ್ ಮತ್ತು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಮದುವೆ ಮಂಟಪಕ್ಕೆ ಕರೆತಂದು ವಿಧಿವಿಧಾನಗಳನ್ನು ಮಂತ್ರಾಕ್ಷತೆಯ ಮೂಲಕ ಪ್ರಧಾನ ಆಗಮಿಕರಾದ ವಿಜಯಕುಮಾರ್ ತಮ್ಮ ತಂಡದೊಂದಿಗೆ ಮಂತ್ರಪಠಣಗಳಿಂದ ಕಲ್ಯಾಣೋತ್ಸವಕ್ಕೆ ಚಾಲನೆ ನೀಡಿದರು.
ಸುಮಾರು ೨ಘಂಟೆಗಳ ವಿಶೇಷ ಪೂಜೆಗಳನ್ನು ಸಲ್ಲಿಸಿ ವಧು-ವರರಿಗೆ ಹಾರ ಬದಲಿಸಿ ಸೀತಾ ಮಾತೆಗೆ ತಾಳಿ ಹಾಕಿದ ನಂತರ ನೆರೆದಿದ್ದ ಭಕ್ತಾಧಿಗಳು ಚಪ್ಪಾಳೆ ತಟ್ಟಿ ಜಯಘೋಷ ಮೊಳಗಿಸಿ ಅದ್ದೂರಿತನಕ್ಕೆ ಸಾಕ್ಷಿಯಾದ ಈ ಕಲ್ಯಾಣ ಮಹೋತ್ಸವವನ್ನು ಕಂಡು ಹಾಜರಿದ್ದ ಸಾವಿರಾರು ಭಕ್ತರು ಪುಳಕಗೊಂಡರು.
ಈ ಕಲ್ಯಾಣ ಮಹೋತ್ಸವಕ್ಕೆ ಆಗಮಿಸಿ ಸೀತಾ- ರಾಮನನ್ನು ಪ್ರಾರ್ಥಿಸಿದರೇ ಕಲ್ಯಾಣ ಭಾಗ್ಯ ಪ್ರಾಪ್ತಿ ಆಗುವ ನಂಬಿಕೆ ಇರುವ ಕಾರಣ ಕಂಕಣ ಭಾಗ್ಯವಿಲ್ಲದ ನೂರಾರು ಯುವಕ ಯುವತಿಯರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಮುಂದಿನ ಕಲ್ಯಾಣದ ಒಳಗೆ ತಮಗೆ ಕಂಕಣಭಾಗ್ಯ ಒದಗಲಿ ಎಂದು ಪ್ರಾರ್ಥಿಸುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ, ಪತ್ನಿ ವನಜಾಕ್ಷಮ್ಮ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್ ಶಂಕರ್, ಜೆಡಿಎಸ್ ಮುಖಂಡರಾದ ಹಳಿಯೂರು ಮಧುಚಂದ್ರ, ಸಿ.ಬಿ.ಲೋಕೇಶ್, ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜುನಾಥ್, ಮಾಜಿ ಸದಸ್ಯ ಡಿ.ಎಸ್.ಕುಮಾರ್, ಮಾಜಿ ತಾ.ಪಂ.ಸದಸ್ಯರಾದ ಚಂದ್ರಶೇಖರ್, ಸಣ್ಣಪ್ಪ, ಯುವಕಾಂಗ್ರೇಸ್ ಅಧ್ಯಕ್ಷ ಸಯ್ಯದ್ , ಮುಖಂಡ ಡೈರಿ ಮಾದು,ಹಳಿಯೂರು ಪ್ರಭಾಕರ್, ಎಚ್.ಜೆ.ರಮೇಶ್, ಚಿಕ್ಕಕೊಪ್ಪಲು ಗಿರೀಶ್, ಸಾಲಿಗ್ರಾಮ ತಾಲೂಕು ಕಚೇರಿ ಶಿರಸ್ತೆದಾರ್ ಮೇಲೂರು ಶಿವಕುಮಾರ್, ಉಪತಹಸೀಲ್ದಾರ್ ಕೆ.ಜೆ ಶರತ್ ಕುಮಾರ್,ಆರ್‌ಐ ಚಿದಾನಂದ,ದೇವಾಲಯದ ಸಿಇಒ ರಘು, ಪಾರುಪತ್ತೆದಾರರಾದ ಪವನ್, ಯತಿರಾಜ್, ದೇವಾಲಯದ ಪರಿಚಾರಕರಾದ ವಾಸುದೇವನ್, ನಾರಾಯಣಯ್ಯಂಗಾರ್ ಇದ್ದರು.ಮುಂಜಾಗ್ರತಾ ಕ್ರಮವಾಗಿ ಸಾಲಿಗ್ರಾಮ ಮತ್ತು ಚುಂಚನಕಟ್ಟೆ ಠಾಣಾ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಸಾದಕ್ಕಾಗಿ ಪರದಾಟ”

ಚುಂಚನಕಟ್ಟೆಯಲ್ಲಿ ಶನಿವಾರ ರಾತ್ರಿ ನಡೆದ ಸೀತಾ ಕಲ್ಯಾಣಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಸೂಕ್ತ ಪ್ರಸಾದ ವ್ಯವಸ್ಥೆ ಮಾಡದೇ ಕೆಲವರಿಗೆ ಪ್ರಸಾದ ಸಿಕ್ಕರೆ ಇನ್ನು ಕೆಲವರಿಗೆ ಪ್ರಸಾದ ಸಿಗದೆ ಪ್ರಸಾದಕ್ಕಾಗಿ ಭಕ್ತಾಧಿಗಳು ಪರದಾಡುವಂತೆ ಆಯಿತು.

ದೇವಾಲಯಕ್ಕೆ ವಾರ್ಷಿಕವಾಗಿ ಭಕ್ತಾಧಿಗಳಿಂದಲೇ ಲಕ್ಷಾಂತರ ರೂ ಆದಾಯ ಬರುತ್ತಿದ್ದರು ಸಹ ಪ್ರಸಾದ ವ್ಯವಸ್ಥೆ ಕಲ್ಪಿಸಲು ಹಿಂದೆ ಬಿದ್ದ ದೇವಾಲಯದ ಆಡಳಿತ ಮಂಡಳಿಯ ವಿರುದ್ದ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿ ತೆರಳಿದರು.


RELATED ARTICLES
- Advertisment -
Google search engine

Most Popular