Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಉಪಾಧ್ಯಕ್ಷೆಯಾಗಿ ಸುನೀತಾರಮೇಶ್ ಅಧಿಕಾರ ಸ್ವೀಕಾರ

ಕೆ.ಆರ್.ನಗರ:ಉಪಾಧ್ಯಕ್ಷೆಯಾಗಿ ಸುನೀತಾರಮೇಶ್ ಅಧಿಕಾರ ಸ್ವೀಕಾರ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆಯಾಗಿ ಸುನೀತಾರಮೇಶ್ ಗುರುವಾರ ಅಧಿಕಾರ ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು ಶಾಸಕರಾದ ಡಿ.ರವಿಶಂಕರ್‌ರವರ ಮಾರ್ಗದರ್ಶನದಲ್ಲಿ ಕಾಲೇಜಿನ ಶೈಕ್ಷಣಿಕ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಇನ್ನೊಂದು ವಾರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಭಿವೃದ್ದಿ ಸಮಿತಿ ಸಭೆ ನಡೆಸಿ ಉಳಿದ ಸದಸ್ಯರನ್ನು ನೇಮಕ ಮಾಡಿಕೊಂಡು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜತೆ ಚರ್ಚೆ ನಡೆಸಿ ಕಾಲೇಜಿಗೆ ಆಗಬೇಕಿರುವ ಅಭಿವೃದ್ದಿ ಕೆಲಸಗಳು ಮತ್ತು ಶೈಕ್ಷಣಿಕ ಏಳಿಗೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದoತೆ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳುವುದರ ಜತೆಗೆ ಅವರಿಗೆ ಸೂಕ್ತ ರಕ್ಷಣೆ ನೀಡಲು ಎಲ್ಲಾ ಮುಂಜಾಗ್ರತೆ ವಹಿಸಿ ಕಾಲ ಕಾಲಕ್ಕೆ ಅವರೊಂದಿಗೆ ಸಂವಾದ ನಡೆಸುವುದಾಗಿ ಪ್ರಕಟಿಸಿದರು.
ತಮ್ಮನ್ನು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಶಾಸಕ ಡಿ.ರವಿಶಂಕರ್ ಅವರಿಗೆ ಸುನೀತಾರಮೇಶ್ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷೆಯನ್ನು ಪ್ರಾಂಶುಪಾಲ ಹೆಚ್.ಕೆ.ಕೃಷ್ಣಯ್ಯ, ವಕೀಲರಾದ ಕೆ.ಸಿ.ಹರೀಶ್, ಹೆಚ್.ಕೆ.ಪ್ರದೀಪ್‌ಕುಮಾರ್, ಯುವ ಕಾಂಗ್ರೆಸ್ ಮುಖಂಡರಾದ ಸಂಜಯ್‌ತಿಲಕ್, ಶಮಂತ್, ಉಪನ್ಯಾಸಕರಾದ ಚಂದ್ರಕುಮಾರ್, ಸುರುಚಿಕೇಶವ್, ಗುರುರಾಜ್ ಮತ್ತಿತರರು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular