ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಅ.೨೮ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ೫೫ ಅಭ್ಯರ್ಥಿಗಳ ಪೈಕಿ ೫ ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದುಕೊಂಡಿದ್ದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮತ್ತು ಆರ್‌ಡಿಪಿಆರ್ ಇಲಾಖೆ ಕೆ.ಎಸ್.ಸತೀಶ್‌ಕುಮಾರ್ ಸೇರಿದಂತೆ ೨೧ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ವಾಪಸಾತಿಗೆ ಕಡೆಯ ದಿನವಾದ ಸೋಮವಾರ ಆರ್‌ಡಿಪಿಆರ್ ಇಲಾಖೆಯ ಕರೀಗೌಡ, ಎಸ್.ಎಸ್.ಸಂದೀಪ್, ಪದವಿ ಕಾಲೇಜಿನ ಪಿ.ಪ್ರಶಾಂತ್, ಉದ್ಯೋಗ ತರಬೇತಿ ಇಲಾಖೆಯ ಇ.ಪ್ರಸನ್ನ,
ಕಂದಾಯ ಇಲಾಖೆಯ ಸಾಲಿಗ್ರಾಮ ತಾಲೂಕು ಕಛೇರಿಯ ಹೆಚ್.ಎಸ್.ಮಹೇಶ್ ನಾಮಪತ್ರಗಳನ್ನು
ಹಿಂಪಡೆದುಕೊoಡರು.
ಚುನಾವಣೆ ನಡೆಯುವ ೩೪ ನಿರ್ದೇಶಕರ ಸ್ಥಾನಗಳ ಪೈಕಿ ೨೧ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೩ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ೨೫ ಮಂದಿ ಸ್ಪರ್ದಾ ಕಣದಲ್ಲಿ ಉಳಿದುಕೊಂಡಿದ್ದಾರೆ.
ಅವಿರೋಧ ಆಯ್ಕೆಯಾದವರು: ಆರೋಗ್ಯ ಇಲಾಖೆಯ ಕೆ.ವಿ.ರಮೇಶ್, ಎಸ್.ಎಂ.ಗoಗಾಧರ, ಕೆ.ಎಸ್.ಪಾರ್ವತಿ, ಎನ್.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಿ.ಇ.ಉಮೇಶ್, ಪಂಚಾಯತ್‌ರಾಜ್ ಇಲಾಖೆ ಆರ್.ಮಂಜುನಾಥ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಕೃಷಿ ಇಲಾಖೆ ಎಸ್.ಹರೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಕೆ.ಎಂ.ಮುರುಳಿ, ಪಶುಸಂಗೋಪನಾ ಇಲಾಖೆ ಡಾ.ಹೆಚ್.ಪಿ.ಹರೀಶ್, ಖಜಾನೆ ಇಲಾಖೆ ಹೆಚ್.ಜೆ.ಜಯಲಕ್ಷಿö್ಮ, ಲೋಕೋಪಯೋಗಿ ಇಲಾಖೆ ದೊರೆಸ್ವಾಮಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಡಿ.ಆರ್.ಕುಮಾರ್, ಅಬಕಾರಿ ಇಲಾಖೆ ಕೆ.ಪಿ.ಶಿವಕುಮಾರ್, ಶಿಕ್ಷಣ ಇಲಾಖೆಯ ಆಡಳಿತ ಕಛೇರಿ ಎಂ.ಎಸ್.ಲೋಕೇಶ್, ಆರ್‌ಡಿಪಿಆರ್ ಇಲಾಖೆ ಕೆ.ಎಸ್.ಸತೀಶ್‌ಕುಮಾರ್, ಜಿ.ಟಿ.ಸಂತೋಷ್, ಪದವಿ ಶಿಕ್ಷಣ ಇಲಾಖೆ ಎಂ.ವಿ.ರಾಘವೇoದ್ರ, ತಾಂತ್ರಿಕ ಶಿಕ್ಷಣ ಇಲಾಖೆ ಬಿ.ರಘು, ಕಂದಾಯ ಇಲಾಖೆಯ ಎಸ್.ಆರ್.ಯಶವಂತ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧಾಕಣದಲ್ಲಿರುವವರು : ಉಳಿದಂತೆ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಾಲ್ಕು ಮಂದಿ
ನಿರ್ದೇಶಕ ಸ್ಥಾನಗಳಿಗೆ ಎಂ.ನಾಗರಾಜು, ಹೆಚ್.ಟಿ.ಪಾಂಡು, ಪೂರ್ಣಿಮ, ಕೆ.ಎಲ್.ಮಂಜುನಾಥ್, ಬಿ.ಎಲ್.ಮಹದೇವ್, ರಾಜಶೇಖರ, ರಾಜೇಶ್ವರಿ ಮತ್ತು ಶಂಕರೇಗೌಡ ಕಣದಲ್ಲಿದ್ದಾರೆ.
ಪ್ರೌಢಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಒಂದು ನಿರ್ದೇಶಕ ಸ್ಥಾನಕ್ಕೆ ಎಸ್.ಎನ್.ಮಂಜು, ಕೆ.ಮಧುಕುಮಾರ್, ಮೋಹನ್, ಲೋಕೇಶ್, ಕಂದಾಯ ಇಲಾಖೆಯ ಒಂದು ಸ್ಥಾನಕ್ಕೆ ಟಿ.ಎನ್.ರವೀಂದ್ರರಾವ್, ಎಸ್.ಶಶಿಕಾಂತ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಒಂದು ಸ್ಥಾನಕ್ಕೆ ಹೆಚ್.ಎಸ್.ರಾಘವೇಂದ್ರ, ಜಿ.ಜೆ.ಶಂಕರ್, ಹೆಚ್.ಪಿ.ಶಶಿಧರ್ ಸ್ಪರ್ಧೆಯಲ್ಲಿದ್ದಾರೆ.
ನ್ಯಾಯಾಂಗ ಇಲಾಖೆಯ ಒಂದು ಸ್ಥಾನಕ್ಕೆ ಹೆಚ್.ಎಲ್.ಪವನ್‌ಕುಮಾರ್, ಎನ್.ವಿ.ತುಳಸಿ, ಅರಣ್ಯ
ಇಲಾಖೆಯ ಒಂದು ಸ್ಥಾನಕ್ಕೆ ಕೆ.ಎಸ್.ಮಂಜುನಾಥ್, ಎಂ.ಎಸ್.ಮಹದೇವ್, ಹಿಂದುಳಿದ ವರ್ಗದ ಒಂದು
ಸ್ಥಾನಕ್ಕೆ ಎಸ್.ಮಧುಸೂದನ್, ಜಿ.ಜೆ.ಮಹೇಶ್ ಕಣದಲ್ಲಿದ್ದಾರೆಂದು ಚುನಾವಣಾಧಿಕಾರಿಯಾದ ಬಿಆರ್‌ಸಿವೆಂಕಟೇಶ್ ತಿಳಿಸಿದ್ದಾರೆ.