ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ ಸಂವಾದ ಕಾರ್ಯಕ್ರಮ
ಕೆ ಆರ್ ನಗರ: ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿರುವ 17 ಆಸ್ವತ್ರೆಗಳಲ್ಲಿ ವೈದ್ಯರು ಸೇರಿದಂತೆ ಒಟ್ಟು 150 ಹುದ್ದೆಗಳು ಖಾಲಿ ಇವೆ ಎಂದು ತಾಲೂಕು ಆರೋಗ್ಯಾಧಿಕಾರಿ ನಟರಾಜ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಖಾಲಿ ಇರುವ ಸ್ಥಾನಗಳನ್ನು ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ತಾಲೂಕ ಆಡಳಿತ ಆರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದಿದ್ದು ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಸಹಾಯಕರು ಮತ್ತು ಡಿ ಗ್ರೂಪ್ ನೌಕರರು ಕೊರತೆಯಿಂದಾಗಿ ಕರ್ತವ್ಯ ನಿರ್ವಹಿಸುವುದು ಬಹಳ ಕಷ್ಟ ಸಾಧ್ಯವಾಗಿದೆ. ಆದರೂ ಒತ್ತಡದ ನಡುವೆಯೂ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಮಾಹಿತಿ ಪ್ರಕಾರ ಕೆ ಆರ್ ನಗರ ಮತ್ತು ಸಾಲಿಗ್ರಾಮ ಎರಡು ತಾಲೂಕಿನಿಂದ 63 ಡೆಂಗೋ ಪ್ರಕರಣಗಳು ದಾಖಲಾಗಿದ್ದು ಯಾವುದೇ ಪ್ರಾಣಪಾಯ ಉಂಟಾಗಿಲ್ಲ, ಆದರೆ 17 ಮಕ್ಕಳು ಜನನ ಸಮಯದಲ್ಲಿ ಮೃತರಾಗಿದ್ದು ಅದಕ್ಕೆ ಅವಧಿಗಿಂತ ಮುಂದೆ ಜನನ ಮತ್ತು ಮಗು ಪರೀಕ್ಷಿಸಿಕೊಳ್ಳದೆ ಇರುವುದು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ಒಳಗಡೆ ಬಂದು ರೋಗಿಗಳನ್ನು ಪರೀಕ್ಷಿಸಲು ಲ್ಯಾಬುಗಳಿಗೆ ಲ್ಯಾಬ್ ಮಾಲೀಕರು ಕರದೈಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ವೈದ್ಯಾಧಿಕಾರಿಗಳು ಈ ಬಗ್ಗೆ ನನಗೆ ಮಾಹಿತಿ ಇಲ್ಲ ಲೋಕಾಯುಕ್ತರೆ ಬಂದು ಆಸ್ಪತ್ರೆ ಪರಿಶೀಲನೆ ನಡೆಯುತ್ತಿರುವಾಗ ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಕೇಳಿ ಆಶ್ಚರ್ಯವಾಗಿದೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಆರೋಗ್ಯದಿಂದ ಇರಲು ಹಲವಾರು ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದು ವರ್ಷದಲ್ಲಿ 52 ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾಹಿತಿಯನ್ನು ನೀಡುತ್ತಿದ್ದೇವೆ ಪ್ರತಿ ಗ್ರಾಮದ ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯ ಸಿಬ್ಬಂದಿಗಳು ಗರ್ಭಿಣಿಯರು ಮಕ್ಕಳು ಸೇರಿದಂತೆ ವೈಯಾರೋದ್ಧರಿಗೆ ತಿಳುವಳಿಕೆಯನ್ನು ನೀಡುತ್ತಿದ್ದು ಅಗತ್ಯವಿದ್ದರೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಕರೆತಂದು ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಮಕ್ಕಳ ಆಸ್ಪತ್ರೆಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಸೇರಿದಂತೆ ಮೈಸೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಿಂದ ನಿತ್ಯ ಸಾವಿರಾರು ಮಂದಿ ಗರ್ಭಿಣಿಯರು ಮತ್ತು ಮಹಿಳೆಯರು ಚಿಕಿತ್ಸೆಗಾಗಿ ಬರುತ್ತಿದ್ದು ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಜತೆಗೆ ಶಾಸಕರಾದ ಡಿ.ರವಿಶಂಕರ್ ಅವರಿಗೂ ಮನವಿ ಮಾಡಿದ್ದು ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆoದು ಪ್ರಕಟಿಸಿದರು.
ಪ್ರತಿಯೊಬ್ಬ ನಾಗರೀಕನು ಎ ಬಿ ಆರ್ ಮೂಲಕ ಚಿಕಿತ್ಸೆಯನ್ನು ಪಡೆದು ಚಿಕಿತ್ಸೆಯ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು ಈ ಬಗ್ಗೆ ನಾಗರಿಕರು ಎಚ್ಚರಿಕೆಯಿಂದ ಇದ್ದು ಸಂಬಂಧಪಟ್ಟ ವೈದ್ಯರು ಮತ್ತು ಸಿಬ್ಬಂದಿಗಳ ಹತ್ತಿರಈ ಬಗ್ಗೆ ಮಾಹಿತಿ ತಿಳಿದು ಒಂದು ವೇಳೆ ಆಸ್ಪತ್ರೆಯ ಹೊರಗಡೆ ಸ್ಕ್ಯಾನಿಂಗ್ ಸೇರಿದಂತೆ ಇನ್ನಿತರ ಔಷಧಿಗಳನ್ನು ಕೊಂಡುಕೊಂಡಿದ್ದರೆ ಆ ದಾಖಲೆಗಳನ್ನು ಆಸ್ಪತ್ರೆಗೆ ಸಲ್ಲಿಸಿದರೆ ಆ ಹಣವನ್ನು ಸಹ ಅವರ ಖಾತೆಗೆ ಜಮಾ ಮಾಡುವಾಗ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ತಿಳಿಸಿದರು. ತುರ್ತು ಅಪಘಾತಗಳು ನಡೆದ ಸಂದರ್ಭದಲ್ಲಿ ರೋಗಿಗಳು ಮತ್ತು ಗಾಯಾಳುಗಳಿಗೆ ತ್ವರಿತ ಸೇವೆ ನೀಡುವ ಸಲುವಾಗಿ ೧೦೪ರಂತೆ ದಿನದ ೨೪ ಗಂಟೆಯೂ ಸ್ಪಂದಿಸಲು ಕಾಲ್‌ಸೆಂಟರ್ ಆರಂಭಿಸಲು ಚಿಂತನೆ ನಡೆಸಿದ್ದು ಇನ್ನೊಂದು ವಾರದಲ್ಲಿ ಕಾರ್ಯಗತಗೊಳಿಸುವುದರ ಜತೆಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಕಂಕಣ ಬದ್ದರಾಗಿದ್ದೇವೆ ಎಂದು ಹೇಳಿದರು.
ಸರ್ಕಾರ ಕಟು ನಿಟ್ಟಿನ ಆದೇಶ ನೀಡಿದ್ದು ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡುವುದಿಲ್ಲ ಎಂದು ಸಬುಬು ಹೇಳಿ ಕಳಿಸುವಂತಿಲ್ಲ. ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಿ ಒಂದು ವೇಳೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದರೆ ಮಾತ್ರ ರೋಗಿಗಳ ಆಸಕ್ತಿಯ ಮೇಲೆ ಬೇರೆ ಆಸ್ಪತ್ರೆಗೆ ಕಳಿಸಿಕೊಡಬಹುದಾಗಿದೆ ಎಂದು ತಿಳಿಸಿದರು. ಎರಡು ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ ಎಲ್ಲರೂ ಎಚ್ಚರಿಕೆಯಿಂದ ಆರೋಗ್ಯದ ಕಡೆ ಗಮನ ಕೊಡಿ ಸ್ವಚ್ಛತೆ ಮತ್ತು ವ್ಯಾಯಾಮ ಹಾಗೂ ಆಹಾರ ಬಳಸುವುದರಲ್ಲಿಯೂ ನಿಗ ವಹಿಸಿ ತಮ್ಮ ಶರೀರವನ್ನು ಪರೀಕ್ಷಿಸಿಕೊಳ್ಳುವ ಮೂಲಕ ಆರೋಗ್ಯವಿರುವಂತೆ ಮನವಿ ಮಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡ ಕೊಪ್ಪಲ್,ಉಪಾಧ್ಯಕ್ಷ ಬೇರ್ಯ ಸಿ.ಸಿ.ಮಹದೇವ್, ಪ್ರಧಾನ ಕಾರ್ಯದರ್ಶಿ ಬೇರ್ಯ, ಮಹೇಶ್, ಕಾರ್ಯದರ್ಶಿ ಆನಂದ್ ಹೊಸೂರು, ಖಜಾಂಚಿ ನಾಗೇಶ್ ಇದ್ದರು.
