ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಆರ್.ನಗರ ಘಟಕದ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆಯನ್ನು ರಾಜ್ಯ ಅಧ್ಯಕ್ಷ ಕೆ.ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಡೆಹಿಡಿದು ಆದೇಶ ಹೊರಡಿಸಿದ್ದಾರೆ.
ಇವೆರಡು ಸ್ಥಾನಗಳಲ್ಲಿ ಇದ್ದ ಅಧ್ಯಕ್ಷ ಸಿ.ಎನ್.ಪ್ರಭು ಮತ್ತು ಕಾರ್ಯದರ್ಶಿ ಸಿ.ಎನ್. ಸ್ವಾಮಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿದ್ದ ಸಲ್ಲಿಸಿದ್ದರು. ಆದರೆ ಹೊಸದಾಗಿ ಬೈಲ ನಿಯಮದಂತೆ ನಡೆಬೇಕಿದ್ದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಸದೇ ಬೈಲ ನಿಯಮವನ್ನು ಉಲ್ಲಂಘಿಸಿ ಅಧ್ಯಕ್ಷರನ್ನಾಗಿ ಸಿ.ಎಲ್.ಸ್ವಾಮಿ ಮತ್ತು ಕಾರ್ಯದರ್ಶಿಯನ್ನಾಗಿ ಪ್ರಭು ಅವರನ್ನು ಆಯ್ಕೆ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಬೈಲ ನಿಯಮವನ್ನು ಗಾಳಿಗೆ ತೂರಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವುದನ್ನ ಕಂಡು ಸಂಘದ ನಿರ್ದೇಶಕರಾದ ಎಸ್.ಕೆ.ಸುರೇಶ್, ಎಸ್.ಎಲ್.ರವಿ, ಮಿರ್ಲೆ ವಿನೋಭ, ರಮಾಮಣಿ, ಬೋಜೆಗೌಡ ಅವರು ರಾಜ್ಯ ಘಟಕಕ್ಕೆ ದೂರು ಸಲ್ಲಿಸಿದ್ದರು.
ಇದನ್ನು ರಾಜ್ಯ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪರಿಶೀಲನೇ ನಡೆಸಿ ಕೆ.ಆರ್.ನಗರ ಘಟಕಕ್ಕೆ ಹೊಸ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಗಳನ್ನು ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬಿತು ಅಗಿರುವುದು ಕಂಡು ಬಂದು ಬಂದಿದೆ.
ಈ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯ ಅಯ್ಕೆಯನ್ನು ತಡೆ ಹಿಡಿದು ಈ ಅದೇಶ ಹೊರಡಿಸಿ ಮುಂದಿನ ಅಧ್ಯಕ್ಷ -ಕಾರ್ಯದರ್ಶಿ ಹುದ್ದೆಯ ಚುನಾವಣೆಯ ಜರುಗುವ ವರೆಗೂ ತಡೆ ಹಿಡಿಯಲಾಗಿದೆ ಎಂದು ರಾಜ್ಯ ಅಧ್ಯಕ್ಷ ಕೆ.ನಾಗೇಶ್ ಮತ್ತು ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಈ ಸಂಬಂಧ ಕೆ.ಆರ್ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅವರಿಗೆ ಅಧ್ಯಕ್ಷ-ಕಾರ್ಯದರ್ಶಿ ಹುದ್ದೆ ತಡೆ ಹಿಡಿದಿರುವ ಅದೇಶ ಪ್ರತಿಯನ್ನು ರವಾನೆ ಮಾಡಲಾಗಿದ್ದು ಇದರಿಂದ ಈ ಶಿಕ್ಷಕರ ಸಂಘದ ಚುನಾವಣೆ ಮುಂದೇನು ಆಗಬಹುದು ಎಂಬ ಕೂತುಹಲ ಶಿಕ್ಷಕರ ವಲಯದಲ್ಲಿ ಮೂಡಿದೆ.
ಈ ಸಂಬಂಧ ಹೊಸ ಅಧ್ಯಕ್ಷ-ಕಾರ್ಯದರ್ಶಿ ಅಯ್ಕೆಯನ್ನು ರಾಜ್ಯ ಸಂಘ ತಡೆ ಹಿಡಿದ ಅದೇಶದ ಪ್ರತಿಯನ್ನು ಸಂಘದ ನಿರ್ದೇಶಕರಾದ ಎಸ್.ಕೆ.ಸುರೇಶ್, ಎಸ್.ಎಲ್.ರವಿ, ಮಿರ್ಲೆ ವಿನೋಭ, ರಮಾಮಣಿ, ಬೋಜೆಗೌಡ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗುರುವಾರ ಸಂಜೆ ನೀಡಿದರು.