ಮಂಡ್ಯ: 21 ಸಾವಿರ ಕ್ಯೂಸೆಕ್ ನೀರು, ಡ್ಯಾಮ್ ಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಒಳ ಹಾಗೂ ಹೊರ ಹರಿವಿನಲ್ಲಿ ಮತ್ತೆ ಹೆಚ್ಚಳವಾಗಿದೆ.
KRSನಿಂದ ನದಿಗೆ 38 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. KRS ಹೊರ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ, ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಮತ್ತೆ ಸ್ಥಗಿತಗೊಂಡಿದೆ.
ಕೆ.ಆರ್.ಎಸ್ ಅಣೆಕಟ್ಟೆ ನೀರಿನ ಮಟ್ಟ
ಗರಿಷ್ಟ ಮಟ್ಟ 124.80 ಅಡಿ.
ಇಂದಿನ ಮಟ್ಟ 123.10 ಅಡಿ.
ಒಳಹರಿವು 21,060 ಕ್ಯೂಸೆಕ್.
ಹೊರಹರಿವು 38,318 ಕ್ಯೂಸೆಕ್