Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆಆರ್‌ಎಸ್: ಇಂದು ಬಾಗಿನ ಅರ್ಪಿಸಲಿರುವ ಸಿಎಂ ಸಿದ್ದರಾಮಯ್ಯ

ಕೆಆರ್‌ಎಸ್: ಇಂದು ಬಾಗಿನ ಅರ್ಪಿಸಲಿರುವ ಸಿಎಂ ಸಿದ್ದರಾಮಯ್ಯ

ಮಂಡ್ಯ : ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ ಹಿನ್ನೆಲೆ. ತುಂಬಿದ ಕಾವೇರಿಗೆ ಇಂದು ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಬಾಗಿನ ಅರ್ಪಿಸಲಿದ್ದಾರೆ.

ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ಬಾಗಿನ ಸಮರ್ಪಣೆ ಆಗಲಿದೆ. ಮಾಜಿ ಸಿಎಂ ಡಿ. ದೇವರಾಜ ಅರಸು ಕಾಲದಲ್ಲಿ ಬಾಗಿನ ಸಂಪ್ರದಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಆಷಾಢ ಮಾಸದಲ್ಲಿ ಬಾಗಿನ ಸಮರ್ಪಣೆ ಇದೇ ಮೊದಲಾಗಿದೆ.

ಸಾಮಾನ್ಯವಾಗಿ ಶ್ರಾವಣ ಅಥವಾ ಭಾದ್ರಪದ ಮಾಸದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ. ಈ ಹಿಂದೆಯೆಲ್ಲಾ ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬ ಸಂಧರ್ಭ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಮುಂಚಿತವಾಗಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿ ಹಿನ್ನೆಲೆಯಲಿ ೩ನೇ ಬಾರಿಗೆ ಕಾವೇರಿ ತಾಯಿಗೆ ಬಾಗಿನ ನೀಡಲಿರುವ ಸಿಎಂ ಸಿದ್ದರಾಮಯ್ಯ.

RELATED ARTICLES
- Advertisment -
Google search engine

Most Popular