ಮಂಡ್ಯ: ಕನ್ನಂಬಾಡಿ ಕಟ್ಟೆ ಸಂಪೂರ್ಣ ಭರ್ತಿಯಾದ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಕಾವೇರಿ ಆರತಿ ಮಾಡುವ ಮೂಲಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಡ್ಯದ ಡಿಸಿ ಕಚೇರಿ ಎದರಿನ ಕಾವೇರಿ ವನದಲ್ಲಿರುವ ಕಾವೇರಿ ಪ್ರತಿಮೆಗೆ ಎಳೆನೀರು ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತ ಪಂಜಿನ ಮೂಲಕ ಕಾವೇರಿ ಆರತಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೆ ಬಿಜೆಪಿಗರು ಕಾವೇರಿ ಮಾತೆಗೆ ಕಾವೇರಿ ಆರತಿ ಮಾಡಿದ್ದಾರೆ.
ರೈತರ ಜೀವನಾಡಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ರೈತರ ಪರವಾಗಿ ಪೂಜೆ ಮಾಡಲಾಗಿದೆ. ನಾಡಿನ ದೊರೆ 50:50 ಅಡಿಯಲ್ಲಿ ಹಗರಣ ಮಾಡಿದ್ದಾರೆ. ಅರಿಸಿಣ-ಕುಂಕುಮ ಕಂಡರೆ ದೂರ ಹೋಗುವ ದೊರೆ ತಮ್ಮ ಹೆಂಡತಿ ಅರಿಶಿನ ಕುಂಕುಮಕ್ಕೆ ಕೊಟ್ಟಿರುವ ಜಾಗ ಅಂತಾರೆ. ರಾಜ್ಯದ ಉಪದೊರೆ ಮೇಲೆ ವಿಶ್ವಾಸ ಇದೆ ಮೊದಲು ಮೇಕೆದಾಟು ಸಮಸ್ಯೆ ಬಗೆಹರಿಸಿ. ಕಾವೇರಿ ಆರತಿ ಮಾಡಲಿ ಮೊದಲು ಮೇಕೆದಾಟು ಯೋಜನೆ ಮರೆಯಬೇಡಿ ಎಂದು ಸಿಎಂ-ಡಿಸಿಎಂಗೆ ಬಿಜೆಪಿ ಕಾರ್ಯಕರ್ತರ ಮನವಿ ಮಾಡಿದ್ದಾರೆ.