ಮಂಡ್ಯ:ಕೆಲವು ದಿನಗಳ ಹಿಂದಷ್ಟೆ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕೆ. ಆರ್.ಎಸ್‌ನಲ್ಲಿ ಇದೀಗ ನಾಯಿಗಳ ಹಾವಳಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಬೃಂದಾವನ ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಐವರು ಪ್ರವಾಸಿಗರಿಗೆ ಕಚ್ಚಿರುವಂತಹ ಘಟನೆ ಕೆಆರ್‌ಎಸ್‌ನ ಬೃಂದಾವನದಲ್ಲಿ ನಡೆದಿದೆ.ನಾಯಿಗಳ ದಾಳಿಯಿಂದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ.ನಂತರ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನೆ ಮಾಡಲಾಯಿತು. ಅಧಿಕಾರಿಗಳ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು. ಚಿರತೆ ಆತಂಕದಿಂದ ಹೊರಬಂದ ಪ್ರವಾಸಿಗರಿಗೆ ನಾಯಿ ಕಾಟ ಶುರುವಾಗಿದೆ.
