ಮಂಡ್ಯ : ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆ ಆಗುತ್ತಿರುವ ಕಾರಣ ಕಳೆದ ೨ ವರ್ಷಗಳಿಂದ ನೀರಿಲ್ಲದೆ ಒಣಗಿದ್ದ ಕೆಆರ್‌ಎಸ್ ಜಲಾಶಯಕ್ಕೆ ಒಂದು ವಾರದಿಂದ ನೀರು ಹರಿದು ಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಜಲಾಶಯದಲ್ಲಿ ನೂರು ಅಡಿ ನೀರು ತುಂಬುವ ಸಾಧ್ಯತೆ ಇದೆ.
ನೀರಾವರಿ ಇಲಾಖೆ ವರದಿ ಪ್ರಕಾರ ಕೆಆರ್‌ಎಸ್ ಒಳಹರಿವು ೧೪,೧೩೫ ಕ್ಯುಸೆಕ್ಸ್ ಇದ್ದು, ೫೩೨ ಕ್ಯುಸೆಕ್ಸ್ ಹೊರ ಹರಿವು ಇದೆ. ಸಧ್ಯ ಜಲಾಶಯದಲ್ಲಿ ೯೮.೧೦ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಸಾಮರ್ಥ್ಯ ೧೨೪.೮೦ ಅಡಿ ಇದ್ದು, ಇದೇ ರೀತಿ ಒಳ ಹರಿವು ಮುಂದುವರಿದರೆ ೧೫ ದಿನದಲ್ಲಿ ಕೆಆರ್‌ಎಸ್ ಭರ್ತಿಯಾಗುವ ಮುನ್ಸೂಚನೆ ಇದೆ.