Thursday, April 3, 2025
Google search engine

Homeಸ್ಥಳೀಯಕೆಎಸ್ ಆರ್ ಟಿಸಿ ಬಸ್ ​- ಕಾರ್ ನಡುವೆ ಅಪಘಾತ: ಗ್ರಾಪಂ ಸದಸ್ಯ ಸಾವು

ಕೆಎಸ್ ಆರ್ ಟಿಸಿ ಬಸ್ ​- ಕಾರ್ ನಡುವೆ ಅಪಘಾತ: ಗ್ರಾಪಂ ಸದಸ್ಯ ಸಾವು

ಮೈಸೂರು: ಕೆಎಸ್ ಆರ್ ಟಿಸಿ ಬಸ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ಗ್ರಾ.ಪಂ. ಸದಸ್ಯ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ನಡೆದಿದೆ.

ನಿಲುವಾಗಿಲು ಗ್ರಾ.ಪಂ. ಸದಸ್ಯ ಭಾಸ್ಕರ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು ಕಾರಿನಲ್ಲಿದ್ದ ಭಾಸ್ಕರ್​​​​​​​ ಪತ್ನಿ, ತಾಯಿ, ಪುತ್ರನಿಗೆ ಗಾಯಗಳಾಗಿವೆ.

ಮೂವರು ಗಾಯಾಳುಗಳು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾ.ಪಂ. ಸದಸ್ಯ ತಮ್ಮ ಕುಟುಂಬದ ಜೊತೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular