Thursday, April 3, 2025
Google search engine

Homeಅಪರಾಧಓವರ್ ಟೇ‍ಕ್ ಭರದಲ್ಲಿ KSRTC ಬಸ್ ಡಿಕ್ಕಿ: ಸೈಕಲ್ ಸವಾರ ಸಾವು

ಓವರ್ ಟೇ‍ಕ್ ಭರದಲ್ಲಿ KSRTC ಬಸ್ ಡಿಕ್ಕಿ: ಸೈಕಲ್ ಸವಾರ ಸಾವು

ಮೈಸೂರು: ಓವರ್ ಟೇಕ್ ಭರದಲ್ಲಿ ಕೆಎಸ್ ಆರ್ ಟಿಸಿ ಬಸ್ ಸೈಕಲ್ ಸವಾರನಿಗೆ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಹಂಪಾಪುರ ಬಸ್ ನಿಲ್ದಾಣದ ಬಳಿ ನಡೆದಿದೆ.

ಹಂಪಾಪುರದ ಚೆಂದೊಡ್ ಶೆಟ್ಟಿ ಮೃತಪಟ್ಟ ಸೈಕಲ್ ಸವಾರ. ಚೆಂದೊಡ್ ಶೆಟ್ಟಿ ಹಂಪಾಪುರ ಗ್ರಾಮದಲ್ಲಿ ಅರ್ಚಕರಾಗಿದ್ದರು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಮುಂಭಾಗದ ಚಕ್ರದಡಿ ಸಿಲುಕಿ ಚೆಂದೊಡ್ ಶೆಟ್ಟಿ ಸಾವನ್ನಪ್ಪಿದ್ದಾರೆ.

ಇನ್ನು ಅಫಘಾತದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪಘಾತ ಬಳಿಕ ಕೆಎಸ್ ಆರ್ ಟಿಸಿ ಬಸ್ ಸ್ಥಳದಲ್ಲೇ ಬಿಟ್ಟು ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಪರಾರಿಯಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

RELATED ARTICLES
- Advertisment -
Google search engine

Most Popular