Sunday, April 20, 2025
Google search engine

Homeರಾಜ್ಯಸುದ್ದಿಜಾಲಅಂಗಡಿಗೆ ನುಗ್ಗಿದ ಕೆಎಸ್‌ಆರ್ಟಿಸಿ ಬಸ್..!

ಅಂಗಡಿಗೆ ನುಗ್ಗಿದ ಕೆಎಸ್‌ಆರ್ಟಿಸಿ ಬಸ್..!

ಹನೂರು : ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್ಟಿಸಿ ಬಸ್ ಅಂಗಡಿಯೊಳಗೆ ನುಗ್ಗಿದ ಪರಿಣಾಮ ದಿನಸಿ ಅಂಗಡಿಗೆ ಪಕ್ಕ ಕುಳಿತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಕಾಲು ಮುರಿದಿರುವ ಘಟನೆ ಎಲ್ಲೇಮಾಳ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಎಲ್ಲೇಮಾಳ ಗ್ರಾಮದಲ್ಲಿ ಚಾಲಕರ ನಿಯಂತ್ರಣ ತಪ್ಪಿ ದ್ವಿ ಚಕ್ರ ವಾಹನದ ಮೇಲೆ ಕುಳಿತಿದ್ದ ಕೌದಳ್ಳಿ ಗ್ರಾಮದ ಮಹೇಶ್ (೩೧)ಎಂಬುವವನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಗೆ ಕಾಲು ಮುರಿದಿದೆ ಅವರನ್ನು ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಿಯಂತ್ರಣ ತಪ್ಪಿದ ಬಸ್ : ಅತಿ ವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣಕ್ಕೆ ಸಿಗದ ಪರಿಣಾಮ ರಸ್ತೆಯ ಸನಿಹದಲ್ಲಿರುವ ಅಂಗಡಿಗೆ ನುಗ್ಗಿದ್ದು ಕ್ಷಣಾರ್ದದಲ್ಲಿ ಹೆಚ್ಚಿನ ಅವಘಡ ತಪ್ಪಿದೆ.

ಕಿರಿದಾದ ರಸ್ತೆ : ಕಿರಿದಾದ ರಸ್ತೆ ಸಹ ಇದ್ದು ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಪರಿಣಾಮ ಅಲ್ಲದೇ ವಿಶೇಷ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ ಅಲ್ಲದೇ ಅತಿ ವೇಗ ಸಹ ಇದಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ

RELATED ARTICLES
- Advertisment -
Google search engine

Most Popular