Friday, April 18, 2025
Google search engine

Homeಬ್ರೇಕಿಂಗ್ ನ್ಯೂಸ್ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸಲು ತೋಡಿದ್ದ ಹಳ್ಳಕ್ಕೆ ಬಿದ್ದ ಕೆಎಸ್ ಆರ್ ಟಿಸಿ ಬಸ್: ಪ್ರಾಣಾಪಾಯದಿಂದ...

ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸಲು ತೋಡಿದ್ದ ಹಳ್ಳಕ್ಕೆ ಬಿದ್ದ ಕೆಎಸ್ ಆರ್ ಟಿಸಿ ಬಸ್: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಮಳವಳ್ಳಿ(ಮಂಡ್ಯ): ಕಾಮಗಾರಿ ಮಾಡಿದ್ದ ಸ್ಥಳದಲ್ಲಿ ನಾಮಫಲಕ ಹಾಕದೇ ಇದ್ದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸಲು ತೋಡಿದ್ದ ಹಳ್ಳಕ್ಕೆ ಕೆಎಸ್ ಆರ್ ಟಿಸಿ ಬಸ್  ಬಿದ್ದಿದ್ದು, ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.

ತಲಕಾಡು ಕಡೆಯಿಂದ ಮಳವಳ್ಳಿ ಕಡೆಗೆ  ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಬಸ್ ಜಖಂಗೊಂಡಿದೆ.

ಸ್ಥಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸೂಚನಾಫಲಕ ಹಾಕದೆ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಸುಧಾಕರ ಆರೋಪಿಸಿದರು.

ಇನ್ನೂ ಚಾಲಕ ಮಹದೇವಸ್ವಾಮಿ ಮಾತನಾಡಿ, ಕಾಮಗಾರಿ ಮಾಡುತ್ತಿರುವವರ ನಿರ್ಲಕ್ಷ್ಯತೆಯಿಂದ ಈ ಅನಾಹುತ ನಡೆದಿದ್ದು, ಯಾವುದೇ ಸೂಚನಾ ಫಲಕ ಹಾಕದಿದ್ದದ್ದು, ಅನಾಹುತಕ್ಕೆ ಕಾರಣ ಎಂದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular