Monday, May 12, 2025
Google search engine

Homeರಾಜ್ಯಕೆಎಸ್ಸಾರ್ಟಿಸಿಗೆ ಮೂರು ಅಂತರರಾಷ್ಟ್ರೀಯ ಫಾರ್ಚುನಾ ಪ್ರಶಸ್ತಿಗಳು

ಕೆಎಸ್ಸಾರ್ಟಿಸಿಗೆ ಮೂರು ಅಂತರರಾಷ್ಟ್ರೀಯ ಫಾರ್ಚುನಾ ಪ್ರಶಸ್ತಿಗಳು

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ)ಯು ಕೈಗೊಂಡಿರುವ ಅತ್ಯುತ್ತಮ ವಿವಿಧ ಉಪಕ್ರಮಗಳಿಗಾಗಿ 3 ಫಾರ್ಚುನಾ ಉತ್ಕೃಷ್ಟತಾ ಅಂತರ್‌ ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿದ್ದು, ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ರವಿವಾರ ಕೆಎಸ್ಸಾರ್ಟಿಸಿಯು ಪ್ರಕಟನೆ ಹೊರಡಿಸಿದ್ದು, ಫಾರ್ಚುನಾ ಸಂಸ್ಥೆಯು ನೀಡುವ ಬಿಸಿನೆಸ್ ಲೀಡರ್ ಆಫ್ ದಿ ಇಯರ್, ವಿಜಿನರಿ ಲೀಡರ್‌ ಶಿಪ್ ಆಫ್ ದಿ ಇಯರ್ ಮತ್ತು ಬ್ರಾಂಡ್ ಸ್ಟ್ರಾಟೆಜಿ ಲೀಡರ್ ಆಫ್ ದಿ ಇಯರ್ ವರ್ಗಗಳಲ್ಲಿ ಪ್ರಶಸ್ತಿಗಳನ್ನು ಕೆಎಸ್ಸಾರ್ಟಿಸಿ ಸಂಸ್ಥೆಗೆ ನೀಡಲಾಗಿದೆ ಎಂದು ತಿಳಿಸಿದೆ.

ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದುಬೈನ ಅಹಮದ್-ಅಲ್-ಹೊಸಾನಿ ಪ್ರಶಸ್ತಿಗಳನ್ನು ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಜಗದೀಶ್ ಮತ್ತು ಶ್ರೀನಾಥ್ ಅವರಿಗೆ ಪ್ರದಾನ ಮಾಡಿದರು ಎಂದು ತಿಳಿಸಿದೆ.

RELATED ARTICLES
- Advertisment -
Google search engine

Most Popular