ಮದ್ದೂರು: ಮದ್ದೂರು ತಾಲೂಕಿನ ಪಿ ಕಾರ್ಡ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಕುದರಗುಂಡಿ ಸಿದ್ದೇಗೌಡ ಅವಿರೋಧ ಆಯ್ಕೆಯಾದರು.
ಈ ಹಿಂದೆ ಇದ್ದ ಅಧ್ಯಕ್ಷ ಕೆಂಪೇಗೌಡರ ರಾಜೀನಾಮೆಯಿಂದ ತೆರುವಾಗಿದ್ದ, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು, ಯಾರು ಕೂಡ ನಾಮಪತ್ರ ಸಲ್ಲಿಸದ ಹಿನ್ನೆಲೆ ಸಿದ್ದೇಗೌಡರನ್ನು ಚುನಾವಣಾಧಿಕಾರಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಗೌತಮ ಅಧ್ಯಕ್ಷ ಸಿದ್ದೇಗೌಡ ಪಿ ಕಾರ್ಡ್ ಬ್ಯಾಂಕ್ ನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಬ್ಯಾಂಕನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತೇನೆ.
ನನ್ನೆಲ್ಲಾ ನಿರ್ದೇಶಕರ ಹಾಗೂ ಮಾಜಿ ಶಾಸಕರ ಆಶೀರ್ವಾದದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಕೆಂಪೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ಕೃಷ್ಣೇಗೌಡ, ಮುತ್ತುರಾಜು, ಮಹದೇವಯ್ಯ, ಮಧು, ಸಿದ್ದ ಮರಿ, ಸಿದ್ದರಾಮು, ಈರೇಗೌಡ ,ಸವಿತಾ, ಗೌರಮ್ಮ, ಸೇರಿದಂತೆ ಇತರರು ಹಾಜರಿದ್ದರು.
ಬಳಿಕ ಅಪಾರ ಅಭಿಮಾನಿಗಳು ಹಾಗೂ ಮುಖಂಡರು ಕಾರ್ಯಕರ್ತರು ಸಿದ್ದೇಗೌಡರನ್ನು ಅಭಿನಂದಿಸಿದರು.