ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಿಂಗೇಗೌಡ ಮಾತನಾಡಿ, ಪ್ರತಿ ವರ್ಷವೂ ಈ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜು ತಮ್ಮ ಮಗಳಾದ ನಿಸರ್ಗರಾಜ್ ಹೆಸರಿನಲ್ಲಿ ನಗದು ಬಹುಮಾನವನ್ನು ನೀಡುತ್ತಾರೆ. ಈ ಬಾರಿ ಮಾದೇಶ, ತುಳಸಿ ಹಾಗೂ ಪ್ರಹ್ನವಿ ಎಂಬ ವಿದ್ಯಾರ್ಥಿಗಳು ಈ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಶಾಲಾ ಮಕ್ಕಳಿಗೆ ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಇದರೊಂದಿಗೆ ಪೋಷಕರೂ ಸಹ ತಮ್ಮ ಮನೆಯಲ್ಲಿ ಕಲಿಕೆಯ ವಾತಾವರಣ ನಿರ್ಮಾಣ ಮಾಡಿ ಮಕ್ಕಳ ವ್ಯಾಸಂಗಕ್ಕೆ ಸಹಕರಿಸಬೇಕು. ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಇಂತಹ ವ್ಯಕ್ತಿಗಳು, ಸಂಘಸಂಸ್ಥೆಗಳು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಕಲಿಕೆಯ ಇನ್ನಷ್ಟು ನವೋಲ್ಲಾಸ ಮೂಡುತ್ತದೆ. ಈ ನಿಟ್ಟಿನಲ್ಲಿ ರಾಜು ರವರ ಸೇವೆ ಗಣನೀಯವಾಗಿದೆ ಎಂದು ಬಣ್ಣಿಸಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಗುಂಬಳ್ಳಿ ಗ್ರಾಪಂ ಅಧ್ಯಕ್ಷೆ ಮೀನಾ, ದೈಹಿಕ ಪರಿವೀಕ್ಷಕ ಲಿಂಗರಾಜು, ಸಿಆರ್‌ಪಿ ರೇಚಣ್ಣ, ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜು ಶಿಕ್ಷಕರಾದ ಮಹದೇವಸ್ವಾಮಿ, ಎಸ್‌ಡಿಎಂಸಿಅಧ್ಯಕ್ಷ ಗುಂಬಳ್ಳಿ ರಾಜಣ್ಣ, ವಿ. ಕಿರಣ್ ಎಲ್.ಎನ್. ಲಕ್ಷ್ಮಿ, ಎಸ್. ಮಂಜುನಾಥ ಬಿ.ವಿ. ನಾಗರತ್ನ ಸೇರಿದಂತೆ ಅನೇಕರು ಇದ್ದರು.