ಮಡಿಕೇರಿ : ರಾಜ್ಯ ಸರ್ಕಾರದ ಖಜಾನೆ ಇಲಾಖೆಯಲ್ಲಿ ಸುದೀರ್ಘ ಕಾರ್ಯನಿರ್ವಹಿಸಿದ್ದ ನಗರದ ನಿವಾಸಿ ಎಂ.ಬಾಲಕೃಷ್ಣ ಅವರು ವಯೋನಿವೃತ್ತಿಯಾಗಿದ್ದು, ಇವರನ್ನು ಸುಳ್ಯದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಸನ್ಮಾನಿಸಲಾಯಿತು. ಮಡಿಕೇರಿ ಜಯನಗರ ಬಡಾವಣೆ ನಿವಾಸಿಯಾಗಿರುವ ಬಾಲಕೃಷ್ಣ 33 ವರ್ಷಗಳ ಕಾಲ ನಗರದ ಜಿಲ್ಲಾ ಖಜಾನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮಂಗಳೂರಿನಲ್ಲಿ ಒಂದೂವರೆ ವರ್ಷ ಕಾರ್ಯನಿರ್ವಹಿಸಿದ, ಬಳಿಕ ಸಹಾಯಕ ಖಜಾನೆ ಅಧಿಕಾರಿಯಾಗಿ ಸುಳ್ಯದಲ್ಲಿ 2 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇದೀಗ ವಯೋನಿವೃತ್ತಿಯಾಗಿರುವ ಬಾಲಕೃಷ್ಣ ಅವರಿಗೆ ಸುಳ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಬಾಲಕೃಷ್ಣ ಅವರ ಪತ್ನಿ ಮಡಿಕೇರಿ ವಿಜಯ ಬ್ಯಾಂಕ್ ಅಧಿಕಾರಿ ಸರಸ್ವತಿ ಕೂಡ ಈ ಸಂದರ್ಭ ಹಾಜರಿದ್ದರು.