ಹುಣಸೂರು: ಹುಣಸೂರಿನ ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಲನಚಿತ್ರಗಳ ಪೋಷಕ ನಟ ಕುಮಾರ್ ಅರಸೇಗೌಡರಿಗೆ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಪೋಷಕ ಕಲಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹಾಸ್ಯನಟ ಡಿಂಗ್ರಿ ನಾಗರಾಜ್ ತಿಳಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ 19 ನೇ ವಾರ್ಷಿಕೋತ್ಸವ ಸಮಾರoಭವನ್ನು ದಿನಾಂಕ 27.11.2024 ಬುಧವಾರ ಕುಮಾರ್ ಅರಸೇಗೌಡ ಸೇರಿದಂತೆ ವಿವಿಧ 10 ಕಲಾವಿದರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದೇವೆ. ಇವರೆಲ್ಲರಿಗೂ ಸಚಿವ ದಿನೇಶ್ ಗುಂಡುರಾವ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.