Tuesday, April 22, 2025
Google search engine

Homeರಾಜಕೀಯಕುಮಾರಸ್ವಾಮಿ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಲ್ಲ: ಎನ್.ಚಲುವರಾಯಸ್ವಾಮಿ

ಕುಮಾರಸ್ವಾಮಿ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಲ್ಲ: ಎನ್.ಚಲುವರಾಯಸ್ವಾಮಿ

ಮಂಡ್ಯ: ಕುಮಾರಸ್ವಾಮಿ ಎಷ್ಟೇ ದೊಡ್ಡ ನಾಯಕನಾದ್ರು ಲೋಕಸಭಾ ಹಂತದಲ್ಲಿ ಬರಲು ಸಾಧ್ಯವಿಲ್ಲ. ಕೆಲಸ ಮಾಡಲು ಆಗಲ್ಲ ಕುಮಾರಸ್ವಾಮಿ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಸ್ಥಳೀಯ ಅಭ್ಯರ್ಥಿಯಾಗಿರುವುದಕ್ಕೆ ಚುನಾವಣೆಗೆ ಕಾರಣ. ಕುಮಾರಸ್ವಾಮಿ ಎಷ್ಟೇ ದೊಡ್ಡ ನಾಯಕನಾದರು ಲೋಕಸಭಾ ಹಂತದಲ್ಲಿ ಬರಲು ಸಾಧ್ಯವಿಲ್ಲ. ಕೆಲಸ ಮಾಡಲು ಆಗಲ್ಲ, ಜನರಿಗೆ ಸಿಗಲು ಆಗಲ್ಲ. ಕುಮಾರಸ್ವಾಮಿ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಲು ಆಗಲ್ಲ ಎಂದು ಚರ್ಚೆ ನಡೆಯುತ್ತಿದೆ ಎಂದರು.

ಐದು ಗ್ಯಾರಂಟಿಯಿಂದ ಜೀವನ ನಡೆಯುತ್ತಿದೆ ನಿಲ್ಲಸಲು ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಗ್ಯಾರಂಟಿ ವಿರುದ್ದವಾಗಿ ಬಿಜೆಪಿ-ಜೆಡಿಎಸ್ ನಿಂತಿದೆ. ಅಧಿಕಾರ ಕೊಟ್ಟರೆ ಅವರು ಕಾನೂನು ಬಳಸಿ ನಿಲ್ಲಿಸುತ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮತ ಹಾಕಿ. ಬರಗಾಲ ಬಂದು 7 ತಿಂಗಳು ಕಳೆದರು ಪರಿಹಾರ ಕೊಟ್ಟಿಲ್ಲ ರೈತರಿಗೆ ಆಕ್ರೋಶ ಇದೆ. ರೈತ ವಿರೋಧಿ ನೀತಿಗೆ ಜೆಡಿಎಸ್-ಬಿಜೆಪಿ ಕೈ ಜೋಡಿಸಿದೆ. ಕೇಂದ್ರ ರೈತರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸ್ಟಾರ್ ಚಂದ್ರು ಕೆಲಸ ಮಾಡಬೇಕು ಎಂದರು.

ಮೈತ್ರಿ ನಿಯೋಗ ನಿರ್ಮಲಾನಂದನಾಥ ಸ್ವಾಮಿ ಹಾಗೂ ಎಸ್ ಎಂಕೆ ಭೇಟಿ ವಿಚಾರವಾಗಿ ಮಾತನಾಡಿ, ನಾವು ಭೇಟಿ ಮಾಡಿದ್ದೇವೆ. ನಾವು ಪ್ರಾಮಾಣಿಕವಾಗಿ ಮಠಕ್ಕೆ ಗೌರವ ಇಟ್ಟುಕೊಂಡಿದ್ದೇವೆ. ಎಸ್ಎಂ ಕೃಷ್ಣ ಅವರು ಎರಡನೇ ಬಾರಿ ಸಿಎಂ ಆಗುವುದು ತಪ್ಪಿದ್ದು ಯಾರಿಂದ? ನಾನು ಜೆಡಿಎಸ್ ನಲ್ಲಿದೆ ಮಂತ್ರಿಯಾಗಿದೆ ಮೊದಲ ಅವಕಾಶ ಎಸ್ ಎಂಕೆ ಇತ್ತು. ಅದನ್ನ ಒಪ್ಪಲಿಲ್ಲ, ಧರ್ಮ ಸಿಂಗ್ ಅವರನ್ನ ಮಾಡಿದ್ರು. ಮಂಡ್ಯ ಜಿಲ್ಲೆಯ ಒಕ್ಕಲಿಗರಿಗೆ ಎರಡನೇ ಅವಕಾಶ ತಪ್ಪಿಸಿದ ಕೀರ್ತಿ ದೇವೇಗೌಡ್ರು ಸಾಹೇಬರು, ಕುಮಾರಸ್ವಾಮಿ ಅವರದ್ದು ಎಂದರು.

ನಿರ್ಮಲಾನಂದನಾಥ ಸ್ವಾಮಿ ಫೋನ್ ಟ್ರ್ಯಾಪ್ ಮಾಡಿದ್ದು ಜೆಡಿಎಸ್. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ರು. ಎಲ್ಲರು ಎಲ್ಲ ಮಠಕ್ಕೆ ಹೋಗ್ತಾರೆ.  ದೇವರು ಇದ್ದಾನೆ ಬಿಡಿ. ಏ.17 ಕ್ಕೆ ಮಂಡ್ಯಕ್ಕೆ ರಾಹುಲ್ ಗಾಂಧಿ ಬರ್ತಾರೆ. ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಯುತ್ತದೆ. ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸಿದ್ದರಾಮಯ್ಯ ಬರ್ತಾರೆ. ನಾಗಮಂಗಲಕ್ಕೆ ಡಿಕೆ ಸಿದ್ದರಾಮಯ್ಯ ಬರ್ತಾರೆ ಎಂದರು.

RELATED ARTICLES
- Advertisment -
Google search engine

Most Popular