ಮಂಡ್ಯ: ಸಕ್ಕರೆ ನಾಡಲ್ಲಿ ನಾಳೆ(ಆ.11) ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳು ಕುಪ್ಪೆ ಗ್ರಾಮದ ಜಮೀನಿನಲ್ಲಿ ಭತ್ತದ ನಾಟಿ ಹಾಕಲಿದ್ದಾರೆ.
ಅರಳು ಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವರ ಜಮೀನಿನಲ್ಲಿ ಭತ್ತದ ನಾಟಿ ಕಾರ್ಯ ನಡೆಯಲಿದೆ . 2008ರಲ್ಲಿ ಸಿಎಂ ಆಗಿದ್ದಾಗ ಪಕ್ಕದ ಸೀತಾಪುರ ಗ್ರಾಮದಲ್ಲಿ ರೈತರೊಂದಿಗೆ ಎಚ್ ಡಿ ಕುಮಾರಸ್ವಾಮಿ ನಾಟಿ ಮಾಡಿದ್ದರು. ಅಂದು ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಸರಣಿ ಆತ್ಮಹತ್ಯೆ ತಡೆದು ರೈತರಲ್ಲಿ ಆತ್ಮ ವಿಶ್ವಾಸ ತುಂಬಲು ರೈತರೊಂದಿಗೆ ಎಚ್ ಡಿ ಕುಮಾರಸ್ವಾಮಿ ನಾಟಿ ಮಾಡಿದ್ದರು. ಜೊತಗೆ ತಾವು ಮಣ್ಣಿನ ಮಗ ಅಲ್ಲ ಎನ್ನುತ್ತಿದ್ದವರಿಗೆ, ಕೆಸರಿನ ಭತ್ತದ ಗದ್ದೆ ಇಳಿದು ನಾಟಿ ನಾನು ಮಣ್ಣಿನ ಮಗ ಎಂದು ಟಕ್ಕರ್ ಕೊಟ್ಟಿದ್ದರು .
ಇದೀಗ ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ಕೆಂಗೆಟ್ಟಿರುವ ಜಿಲ್ಲೆಯ ರೈತರಲ್ಲಿ ಮತ್ತೊಮ್ಮೆ ಆತ್ಮವಿಶ್ವಾಸ ತುಂಬಲು ರೈತರ ಜೊತೆ ಎಚ್ ಡಿ ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ . ಭತ್ತದ ನಾಟಿಗೆ ಜಮೀನನ್ನು ರೈತರು ಹದಗೊಳಿಸಿದ್ದಾರೆ . ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಜೊತೆ ನಾಟಿ ಹಾಕಲು ರೈತ ಮಹಿಳೆಯರು ಉತ್ಸಾಹದಲ್ಲಿದ್ದಾರೆ. ಭತ್ತದ ನಾಟಿ ಕಾರ್ಯಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ಅರಳಕುಪ್ಪೆ ಗ್ರಾಮಕ್ಕೆ ಫ್ಲೆಕ್ಸ್ ಬ್ಯಾನರ್ಗಳಿಂದ ಗ್ರಾಮವನ್ನು ಸಿಂಗಾರ ಗೊಳಿಸಲಾಗಿದೆ.
ಜಮೀನು ಸಿದ್ಧತೆ ಪರಿಶೀಲಿಸಿದ ಪುಟ್ಟರಾಜು
ಅರಳುಕುಪ್ಪೆ ಗ್ರಾಮದಲ್ಲಿ ಎಚ್ ಡಿ ಕುಮಾರಸ್ವಾಮಿ ನಾಳೆ ನಾಟಿ ಮಾಡಲಿರುವ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ಸಿಎಸ್ ಪುಟ್ಟರಾಜು ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಸಲಹೆ, ಸೂಚನೆ ನೀಡಿದರು.
