ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಸೂಯೆಗೆ ಯಾವುದೇ ರೀತಿಯ ಔಷಧವಿಲ್ಲ. ನಾನು ರಾಜಿನಾಮೇ ಕೊಡಬೇಕು ಎನ್ನುವುದು ಅವರ ಆಸೆ. ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಚ್‌ಡಿಕೆಗೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ನಾನು ಕಿಂಗ್ ಮೇಕರ್ ಆಗುತ್ತೇನೆಂದುಕೊಂಡಿದ್ದರು. ಆದರೆ ಅವರ ಅಧ್ಯಕ್ಷತೆಯಲ್ಲಿ ಕೇವಲ ೧೮ ಸ್ಥಾನಗಳು ಬಂದವು. ನನ್ನ ಅಧ್ಯಕ್ಷತೆಯಲ್ಲಿ ೧೩೬ ಸ್ಥಾನ ಬಂದಿರುವುದಕ್ಕೆ ಅವರಿಗೆ ಅಸೂಯೆ ಎಂದು ಟೀಕಿಸಿದರು.
ಜೆಡಿಎಸ್‌ನವರು ತಮ್ಮ ಶಕ್ತಿ ಕಳೆದುಕೊಂಡಿದ್ದೇವೆಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಲಿ ಎಂದು ಹೇಳಿದರು.