Thursday, April 10, 2025
Google search engine

Homeರಾಜ್ಯಸುದ್ದಿಜಾಲಆ.11ರಂದು ರೈತರ ಗದ್ದೆಯಲ್ಲಿ ಭತ್ತ ನಾಟಿ ಮಾಡಲಿರುವ ಕುಮಾರಸ್ವಾಮಿ: ನಿಖಿಲ್‌ ಕುಮಾರಸ್ವಾಮಿ

ಆ.11ರಂದು ರೈತರ ಗದ್ದೆಯಲ್ಲಿ ಭತ್ತ ನಾಟಿ ಮಾಡಲಿರುವ ಕುಮಾರಸ್ವಾಮಿ: ನಿಖಿಲ್‌ ಕುಮಾರಸ್ವಾಮಿ

ಪಾಂಡವಪುರ : ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರವಲಯದ ರೈತರ ಗದ್ದೆಯಲ್ಲಿ ಆ.11ರಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಗದ್ದೆ ನಾಟಿ ಮಾಡುವ ಕಾರ್ಯಕ್ರಮಕ್ಕಾಗಿ ಸಿದ್ಧಗೊಂಡಿರುವ ಗ್ರಾಮದ ಲಕ್ಷ್ಮಣ ಅವರ ಜಮೀನಿನ ಬಳಿ ಆಗಮಿಸಿ ವೀಕ್ಷಣೆ ಮಾಡಿದ ಬಳಿಕ ಗುರುವಾರ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ರಾಜ್ಯದಲ್ಲಿ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಅರಳಕುಪ್ಪೆ ಗ್ರಾಮದ ಹೊರವಲಯದಲ್ಲಿ ಗದ್ದೆನಾಟಿ(2018) ಮಾಡಿದ್ದರು. ಈಗ ಕೇಂದ್ರ ಸಚಿವರಾಗಿದ್ದಾರೆ. ಹಾಗಾಗಿ ಜಿಲ್ಲಾ ನಾಯಕರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆ.11ರಂದು ಕುಮಾರಣ್ಣ ಅವರು ಮತ್ತೆ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ. ಗದ್ದೆನಾಟಿಗೂ ಮೊದಲೇ ಕಾವೇರಿ ಮಾತೆಗೆ ಪೂಜೆಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಜನತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದರಾಗಿ ಆಯ್ಕೆ ಮಾಡುವ ಮೂಲಕ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ವರ್ಷ ಭೀಕರ ಬರಗಾಲ ಎದುರಾಗಿತ್ತು. ಇದೀಗ ಕಾವೇರಿಕೊಳ್ಳದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆ ಜನತೆ ಸಂವೃದ್ಧಿಯಾಗಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹೀಗಾಗಿ ರೈತರಿಗೆ ಉತ್ಸಾಹ ತುಂಬಲು ಭತ್ತದ ನಾಟಿ ಹಾಕುತ್ತಿದ್ದಾರೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇತರರು ಈ ವೇಳೆ ಇದ್ದರು.

RELATED ARTICLES
- Advertisment -
Google search engine

Most Popular