ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇವೇಗೌಡರು ಯಾರಿಗೂ ಕೂಡ ಮೋಸ ಮಾಡಿಲ್ಲ ಆ ರೀತಿ ಮೋಸ ಮಾಡಿದ್ದರೆ ಪ್ರಧಾನ ಮಂತ್ರಿಯಾ ತನಕ ಹೋಗಲು ಜನ ಬಿಡುತ್ತಿದ್ದೀರಾ ಎಂದು ಮಾಜಿ ಶಾಸಕ ಸಾರಾ ಮಹೇಶ್ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟಂತವರು ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಮಂಡ್ಯ ಲೋಕಸಭೆಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಸೇರಿರುವುದರಿಂದ ನಮ್ಮ ಕ್ಷೇತ್ರದಲ್ಲೇ ಹೆಚ್ಚು ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದರು.
ಮೈಸೂರು ಮಹಾರಾಜರು ಮತ್ತು ಅವರ ಪತ್ನಿ ಮಹಾರಾಣಿಯವರು ಅರಮನೆ ಮುಂದೆ ಇರುವ ಕಸವನ್ನ ಅವರೇ ಸ್ವಚ್ಛ ಮಾಡುತ್ತಿರುವ ದೃಶ್ಯವನ್ನು ನಾನು ಮಾಧ್ಯಮದಲ್ಲಿ ನೋಡಿದೆ ಆದರೆ ಅಂತಹ ಸರಳ ವ್ಯಕ್ತಿತ್ವ ಉಳ್ಳಂತಹ ಮಹಾರಾಜ ಎದುರು ಅವರ ಗೆಲುವಿದು ಮೈಸೂರಿನಲ್ಲಿ ಮೈತ್ರಿ ಮುಖಂಡರು ಹೆಚ್ಚು ಸಹಕಾರವನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು ನಮ್ಮ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡಿರುವ ಯದುವೀರ್ ಜನರಿಗೆ ರಾಜನರಾಗಿಯೂ ಸೇವಕರಾಗಿಯೂ ಕೆಲಸ ಮಾಡುತ್ತಾರೆ. ಅವರ ಕೈಯಲ್ಲದ ಸಹಾಯವನ್ನುಮಾಡುತ್ತಿರುವ ಎದುರು ಅವರಿಗೆ ಸರ್ಕಾರದ ಅಧಿಕಾರ ಸಿಕ್ಕರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಾರೆ.
ಕಾಂಗ್ರೆಸ್ ಐದು ವರ್ಷದಲ್ಲಿ ಯಾವ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಗ್ಯಾರಂಟಿ ಕೊಟ್ಟಿದ್ದೇವೆ ಎಂಬುವುದರಲ್ಲಿ ಕಾಲ ಕಳೆದಿ ಅಧಿಕಾರ ಮುಗಿದಿರುತ್ತದೆ. ನಮ್ಮೆಲ್ಲರ ಗುರಿ ಒಂದೇ ಆಗಿರಬೇಕು ಕೇದಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲ್ಲಿಸಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಜನರ ಸಮಸ್ಯೆ ಕೇಳಿದ ಮಾಜಿ ಶಾಸಕ ಸಾ.ರಾ.ಮಹೇಶ್: ತಾಲೂಕಿನ ಹೊಸಳ್ಳಿ ಅಕ್ಕಪಕ್ಕ ಗ್ರಾಮಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಹೇಳಿಕೊಂಡರು ಕೆರೆಕಟ್ಟೆಗೆ ಮತ್ತು ನಾಳೆಗಳಲ್ಲಿ ನೀರಿಲ್ಲದೆ ಪರದಾಡುತ್ತಿದ್ದೇವೆ ನೀವು ಅಧಿಕಾರದಲ್ಲಿದ್ದಾಗ ನೀರಿನ ಸಮಸ್ಯೆ ಇರಲಿಲ್ಲ ಆದರೆ ಈಗ ಕುಡಿಯುವನು ನೀರು ಕೂಡ ಸಿಗುತ್ತಿಲ್ಲ ಎಂದು ತಮ್ಮ ಅಳಲು ಹೇಳಿಕೊಂಡರು. ನಾನು ಅಧಿಕಾರದಲ್ಲಿದ್ದಾಗ ತಿಂಗಳಿಗೊಮ್ಮೆ ಕೆರೆಕಟ್ಟೆ ನಾಲೆಗಳಿಗೆ ನೀರನ್ನ ಬಿಡಿಸುತ್ತಿದ್ದೆ ಆದರೆ ಈಗ ನನಗೆ ಆ ಶಕ್ತಿ ಇಲ್ಲ ಆಸಕ್ತಿ ಪಡೆದವರು ಆ ಕೆಲಸ ಮಾಡಿಸಬೇಕು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಈಡೇರಿಸಲು ಅವರೊಂದಿಗೆ ನಾನು ಕೂಡ ಇರುತ್ತೇನೆ ಇದನ್ನ ಗಮನದಲ್ಲಿಟ್ಟುಕೊಂಡು ಅವರನ್ನು ಗೆಲ್ಲಿಸಿಕೊಡಿ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದು ಅವರನ್ನ ಗೆಲ್ಲಿಸುವ ಜವಾಬ್ದಾರಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜವಾಬ್ದಾರಿ ಆಗಿದ್ದು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಗಿಂತ ಮಂಡ್ಯ ಲೋಕಸಭಾ ಈ ಚುನಾವಣೆಗೆ ಬಿಜೆಪಿ ಹೆಚ್ಚು ಮತಗಳನ್ನು ಕೊಡುವ ಮೂಲಕ ಕುಮಾರಸ್ವಾಮಿ ಅವರನ್ನು ಗೆಲ್ಲಿಸುತ್ತೇವೆ ಎಂದರು. ಮೂಲೆಪೆಟ್ಲು, ವಡ್ಡರಹಳ್ಳಿ(ಶಿವಪುರ), ಮಾರ್ಚಳ್ಳಿ, ಲಾಲದೇವನಹಳ್ಳಿ, ಬಸವರಾಜಪುರ, ಹೊಸಹಳ್ಳಿ, ಡೋರನಹಳ್ಳಿ, ಬಸವಪಟ್ಟಣ, ಹಂಗರಬಾಯನಹಳ್ಳಿ ದೊಡ್ಡೆಕೊಪ್ಪಲು, ಕುಂಬಾರಕೊಪ್ಪಲು, ಅರಕೆರೆ, ಅರಕೆರೆಕೊಪ್ಪಲು, ಚೌಕಹಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ತಾ ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕಗ್ಗೆರೆ ಕುಚೇಲ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ದ್ರಾಕ್ಷಾಯಿಣಿ, ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಹೊಸೂರ್ ಅನಿಲ್, ತಾಲೂಕು ಬಿಜೆಪಿ ಕಾರ್ಯದರ್ಶಿ ಮಾರ್ಕಂಡಯ್ಯ ಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಟಿ ಕುಮಾರ್, ಜೆಡಿಎಸ್ ತಾ ವಕ್ತಾರ ಕೆ.ಎಲ್.ರಮೇಶ್, ಹರದನಹಳ್ಳಿ ರಮೇಶ್, ಬಾಲಾಜಿಗಣೇಶ್, ಚನ್ನಂಗೆರೆ ಕುಚೇಲ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಅರಕೆರೆ ಮಧು, ಪುಟ್ಟರಾಜು, ದೊರೆಸ್ವಾಮಿ, ಎಸ್.ಎಸ್.ನಟರಾಜ್, ಗಣೇಶ, ಶಂಕರ್, ಸುನಿಲ್ ಡ್ರೈವರ್ ಸೋಮು, ಹಂಪಾಪುರ ದಲಿತ ಮುಖಂಡ ಸುರೇಶ್, ಚೆಲುವರಾಜು, ಭೇರ್ಯಟ್ಯಾಂಕ್ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.