Monday, April 21, 2025
Google search engine

Homeಅಪರಾಧಕುಮಟಾ: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ

ಕುಮಟಾ: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ

ಕುಮಟಾ: ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಸಿಟ್ಟಾದ ಮಾಜಿ ಪ್ರಿಯಕರ ಹಾಲಿ ಪ್ರಿಯಕರನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಪಟ್ಟಣದ ಮಣಕಿ ಮೈದಾನದಲ್ಲಿ ನಡೆದಿದೆ.

ತಾಲೂಕಿನ ದುಂಡುಕುಳಿಯ ಸಂತೋಷ ಅಂಬಿಗ ಎಂಬಾತನೆ ಚಾಕು ಇರಿತಕ್ಕೆ ಒಳಗಾಗಿದ್ದು, ರಾಜೇಶ ಅಂಬಿಗ ಹಲ್ಲೆ ಮಾಡಿದ ಆರೋಪಿ.

ರಾಜೇಶ ಅಂಬಿಗ ಯುವತಿಯೋರ್ವಳನ್ನು ಪ್ರೀತಿ ಮಾಡುತ್ತಿದ್ದು ಇಬ್ಬರೂ ಚೆನ್ನಾಗಿಯೇ ಇದ್ದರೂ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲದ ಕಾರಣ ಆಕೆ ಆತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು.

ಇದೀಗ ಹಲ್ಲೆಗೆ ಒಳಗಾದ ಸಂತೋಷ ಅಂಬಿಗ ಈ ಹಿಂದೆ ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಪ್ರೀತಿ ಮಾಡಲು ಆರಂಭಿಸಿ ವಿವಾಹ ಕೂಡ ನಿಶ್ಚಿಯವಾಗಿತ್ತು. ಇದೆ ವಿಚಾರಕ್ಕೆ ಸಿಟ್ಟಾದ ರಾಜೇಶ, ಸಂತೋಷನಿಗೆ ಕರೆ ಮಾಡಿ ನಿನ್ನ ಬಳಿ ಮಾತನಾಡುವುದು ಇದೆ. ನೀನು ಒಬ್ಬನೇ ಮಣಕಿ ಗೌಂಡ್‌ಗೆ ಬಾ ಎಂದು ತಿಳಿಸಿದ್ದಾನೆ.

ಈ ವೇಳೆ ಸಂತೋಷನ ಕಣ್ಣಿಗೆ ಖಾರದಪುಡಿ ಎಸೆದು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದಾಗಿ ಸಂತೋಷ ಗಂಭೀರ ಗಾಯಗೊಂಡಿದ್ದು, ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಕುಮಟಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -
Google search engine

Most Popular