ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಈಶ್ವರ ನಗರದಲ್ಲಿ ಬೌದ್ದಿಕ ವಿಕಲಚೇತನರ ಅನುಪಾಲನ ಗೃಹ ಆರಂಬಿಸಲಾಗಿದ್ದು ಅರ್ಹರು ಇಲ್ಲಿಗೆ ದಾಖಲಾಗಿ ಪ್ರಯೋಜನ ಪಡೆಯಬೇಕು ಎಂದು ಮಾತೃಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕುಪ್ಪೆಮಂಜುನಾಥ್ ಹೇಳಿದರು.
ದಾಖಲಾತಿಯ ಮೂಲಕ ಅನುಪಾಲನ ಗೃಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಕಲ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಮತ್ತು ಮಾತೃಶ್ರೀ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಪ್ರಾರಂಬಿಸಲಾಗಿದ್ದು ೨೫ ಮಂದಿ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮೈಸೂರು ವಿಭಾಗದವರು ದಾಖಲಾಗಬಹುದಾಗಿದ್ದು ಇಲ್ಲಿ ಉಚಿತ ವಸತಿ, ಊಟ,ವೈಧ್ಯಕೀಯ ಸವಲತ್ತಿನ ಜತೆಗೆ ವೃತ್ತಿ ತರಬೇತಿ ನೀಡಲಾಗುತ್ತಿದ್ದು ಸಾರ್ವಜನಿಕರು ಅರ್ಹರನ್ನು ಗುರುತಿಸಿ ಸೇರಿಸಬಹುದು ಎಂದರು. ಅನುಪಾಲನ ಗೃಹಕ್ಕೆ ದಾನಿಗಳು ಅಗತ್ಯ ನೆರವು ನೀಡಬೇಕೆಂದು ಮನವಿ ಮಾಡಿದ ಅವರು ಸಹಾಯ ಮಾಡುವವರಿಗೆ ಆದಾಯ ತೆರಿಗೆಯಿಂದ ವಿನಾಯ್ತಿ ದೊರೆಯಲಿದ್ದು ಹೃದಯವಂತರು ನಮ್ಮೊಂದಿಗೆ ಕೈಜೋಡಿಸಬೇಕೆಂದರು.
ಚುನಾಯಿತ ಜನ ಪ್ರತಿನಿಧಿಗಳು ಮತ್ತು ನಾಗರೀಕರು ಮೂಲ ಸವಲತ್ತು ಒದಗಿಸಲು ಸಹಕಾರ ಮತ್ತು ಬೆಂಬಲ ನೀಡಿದರೆ ಬೌದ್ದಿಕ ವಿಕಲಚೇತನರಿಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಅಧೀಕ್ಷಕಿ ಶಿವಗಂಗೆ, ದಾದಿ ರೋಜಾರಾಣಿ, ಸಹಾಯಕ ಮಿಥುನ್, ಸಿಬ್ಬಂದಿಗಳಾದ ಲಕ್ಷೀದೇವಿ, ನಟರಾಜು ಮತ್ತಿರರರು ಇದ್ದರು.