Friday, April 11, 2025
Google search engine

Homeಸ್ಥಳೀಯಮೈಸೂರಿನ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಎಲ್. ನಾಗೇಂದ್ರ ಆಯ್ಕೆ: ಅಭಿನಂದನೆ

ಮೈಸೂರಿನ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಎಲ್. ನಾಗೇಂದ್ರ ಆಯ್ಕೆ: ಅಭಿನಂದನೆ

ಮೈಸೂರು: ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಎಲ್ ನಾಗೇಂದ್ರ ಅವರು ಆಯ್ಕೆಯಾಗಿದ್ದು ಅವರ ಅಭಿಮಾನಿಗಳು, ಹಿತೈಷಿಗಳು ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಎಲ್. ನಾಗೇಂದ್ರ ಅವರ ಹೆಸರನ್ನ ಬಿಜೆಪಿ ಚುನಾವಣಾಧಿಕಾರಿ ಡಾ.ಸಿದ್ದರಾಮಯ್ಯ ಘೋಷಣೆ ಮಾಡಿದರು. ಎಲ್ ನಾಗೇಂದ್ರ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದ್ದು, ಅಭಿಮಾನಿಗಳು, ಹಿತೈಷಿಗಳು ಹಾಗೂ ಚುನಾವಣಾಧಿಕಾರಿ ಡಾ.ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಎಲ್.ನಾಗೇಂದ್ರ, ಬಿಜೆಪಿ ನನ್ನನ್ನ ಅಧಿಕೃತವಾಗಿ ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕಳೆದ ಒಂದು ಲೋಕಸಭಾ ಚುನಾವಣೆಯಲ್ಲಿ ಒಂದುವರೆ ಲಕ್ಷ ಅಂತರದಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ನಿಮ್ಮಲ್ಲರ ಸಹಕಾರ ಕಾರಣ ಎಂದರು.

ಹಾಗೆಯೇ ಇಂದು ಇಡಿ ವಿಶ್ವ ನಮ್ಮ ಕಡೆ ನೋಡುತ್ತಿದೆ. ಆರ್ಥಿಕವಾಗಿ ವಿಶ್ವದ ಐದನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ದೇಶದ ಅಭಿವೃದ್ಧಿಯಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಈಗ ಕಾಣುತ್ತಿದೆ. ದೇಶದ 140 ಕೋಟಿ ಜನರ ಹಿತ ಕಾಪಾಡುವ ಕೆಲಸವನ್ನ ಮೋದಿ ಅವರು ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಹಗಲಿರುಳು ಎನ್ನದೆ ಶ್ರಮಿಸೋಣ. ಪಕ್ಷವನ್ನ ನಗರದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದುಡಿಯೋಣ. ನಿಮ್ಮ ಸಹಕಾರ ಹೀಗೆ ಇರಲಿ. ಮುಂದೆ ನಾಲ್ಕಕ್ಕೆ ನಾಲ್ಕು ಕ್ಷೇತ್ರವನ್ನೂ ಗೆಲ್ಲೋಣ ಎನ್ನುವ ವಿಶ್ವಾಸ ಇಟ್ಟು ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಧನ್ಯವಾದಗಳನ್ನ ತಿಳಿಸಿದರು.

RELATED ARTICLES
- Advertisment -
Google search engine

Most Popular