ಚಾಮರಾಜನಗರ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬರೆದುಕೊಟ್ಟಿರುವ ಸಂವಿಧಾನ ನಮ್ಮ ದೇಶದ ಧರ್ಮ ಗ್ರಂಥವಾಗಿದೆ ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಹೇಳಿದರು. ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸರ್ವೋದಯ ಸಾಮರಸ್ಯ ವೇದಿಕೆಯ ವತಿಯಿಂದ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತು ಚಿಂತನ ಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ಸ್ವಾತಂತ್ರ್ಯದ ಬಳಿಕ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಾಗೂ ಸಾವಿರಾರು ಜಾತಿಗಳು. ನೂರಾರು ಪಂಥಗಳು ಹಾಗೂ ಅನೇಕ ಧರ್ಮಗಳನ್ನು ಹೊಂದಿರುವ ಭಾರತಕ್ಕೆ ಉತ್ಕೃಷ್ಠವಾದ ಸಂವಿಧಾನದ ಅವಶ್ಯಕತೆ ಬಹಳ ಇತ್ತು.
ಈ ಜವಾಬ್ದಾರಿಯನ್ನು ತೆಗೆದುಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲಾ ದೇಶಗಳ ಸಂವಿಧಾನವನ್ನು ಪರಾರ್ಮಶೆ ಮಾಡಿ, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಪ್ಪುವಂತೆ ಸಂವಿಧಾನವನ್ಮ್ನ ನೀಡಿದರು. ಶೋಷಿತರು, ಬಡವರು ಹಾಗೂ ಅಶಕ್ತರ ಪರವಾಗಿರುವ ಸಂವಿಧಾನ ಅವರ ಸರ್ವತೋಮುಖ ಉದ್ದಾರಕ್ಕಾಗಿ ಶ್ರಮಿಸುತ್ತಿದೆ. ಇಂಥ ಸಂವಿಧಾನ ನಮ್ಮ ದೇಶದ ಮೂಲ ಧರ್ಮ ಗ್ರಂಥವಾಗಿದೆ. ಅಲ್ಲದೇ ಮಹಿಳೆಯರು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯವನ್ನು ಕಲ್ಪಿಸುವ ಮೂಲಕ ಸಂವಿಧಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಮ್ಳತ್ತಿದೆ. ಭಾರತೀಯರಾದ ನಮಗೆ ಸರ್ವಶೇಷ್ಟವಾದ ಸಂವಿಧಾನವೇ ಧರ್ಮ ಗ್ರಂಥವಾಗಿದೆ. ಅಂಬೇಡ್ಕರ್ ಅವರು ಎಲ್ಲರಿಗೂ ಮತದಾನದ ಹಕ್ಕು ನೀಡುವ ಮೂಲಕ ಸಮಾನತೆಯನ್ನು ಕಲ್ಪಿಸಿದರು ಎಚಿದು ಸ್ಮರಿಸಿದರು.
ಸಾಹಿತಿ, ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಪ್ಪುವಂತ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆ, ಭಾತೃತ್ವದಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದರು. ಅವರ ಆಶಯದಂತೆ ಆಡಳಿತ ನಡೆಸುವ ಮೂಲಕ ಸಂವಿಧಾನ ಮೂಲ ಉದ್ದೇಶ, ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂವಿಧಾನವನ್ನು ರಕ್ಷಣೆ ಮಾಡುವ ಜೊತೆಗೆ ಸಮಾಜದಲ್ಲಿ ತುಳಿತಕ್ಕೊಳದವರು ಹಾಗೂ ಅಭದ್ರತೆವುಳ್ಳರಿಗೆ ಅಸರೆಯಾದಾಗ ಮಾತ್ರ ಅಭಿವೃದ್ದಿ ಪರ ಸರ್ಕಾರಗಳು ನಿಲುವು ಸಂವಿಧಾನ ಬದ್ದವಾಗಿರಬೇಕಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಮಾತನಾಡಿ ಸಾಮರಸ್ಯ ದೀಪವನ್ನು ಹಚ್ಚಿದಾಗ ಎಲ್ಲರಿಗೂ ಬೆಳಕು ನೀಡುವಂತಹ ವಾತಾವರಣವನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಜ್ಯೊತಿ ಪ್ರಜ್ವಲಿಸಿ ಎಲ್ಲರಿಗೂ ಬೆಳಕು ನೀಡುವ ಜೊತೆಗೆ ಅವರ ಬದುಕು ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದರು.
ನಗರದ ವಿರಕ್ತಮಠದ ಚನ್ನಬಸವಸ್ವಾಮಿಜೀ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಆರ್. ಎಂ. ರಾಜಪ್ಪ, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮುಖಂಡರಾದ ಬಸವರಾಜು, ಜಿ. ರಾಜಪ್ಪ, ಮಂಜುಳ, ಮಲ್ಲಣ್ಣ, ತೊರಹಳ್ಳಿ ಕುಮಾರ್, ಎಪಿಎಂಸಿ ಅಧ್ಯಕ್ಷ ಮನೋಜ್ ಕುಮಾರ್, ಕೂಡ್ಲೂರು ಶ್ರೀಧರಮೂರ್ತಿ, ಆಲೂರುಮಲ್ಲು, ಸಿ.ಕೆ. ಮಂಜುನಾಥ್ ಸ್ಭೆರಿದಂತೆ ಇತರರು ಹಾಜರಿದ್ದರು.