ಮೈಸೂರು: ವಿಜಯನಗರ ಎರಡನೇ ಹಂತದ ಕೊಡವ ಸಮಾಜದ ಎದುರಿನ ನಾರಾಯಣ ವೈದ್ಯಕೀಯ ಕೇಂದ್ರದಲ್ಲಿ ಆರಂಭಿಸಿರುವ ಪ್ರಯೋಗಾಲಯ ಸೇವೆಗಳಿಗೆ ಮಾ.೧೪ರಂದು ಬೆಳಗ್ಗೆ ೧೦.೩೦ಕ್ಕೆ ಚಾಲನೆ ದೊರೆಯಲಿದೆ ಎಂದು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಬೆಟ್ಟದೂರು ತಿಳಿಸಿದರು.
ವಿಜಯನಗರ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೆ ಸುಧಾರಿತ ಪ್ರಯೋಗಾಲಯ ಸೇವೆ ಒದಗಿಸುವ ಉದ್ದೇಶ ಈ ಕೇಂದ್ರ ಹೊಂದಿದೆ. ಯೋಗಾ ನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮೀಜಿ, ನಿವೃತ್ತ ಡಿಎಚ್‌ಒ ಡಾ.ವಿ. ಅರವಿಂದಪ್ಪ ಅತಿಥಿಗಳಾಗಿರುವರೆಂದರು.