ಹೊಸೂರು: ಕೋರಂ ಅಭಾವದಿಂದ ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಯಿತು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಮಲಮ್ಮ ಮತ್ತು ವಿವೇಕ ನಂದ ಸ್ಪರ್ಧಿಸಿದ್ದರೇ ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ಥಯ್ಯ ಮತ್ತು ಎಚ್.ಬಿ.ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯ ಸಭೆಯನ್ನು 12ರಿಂದ 1 ಗಂಟೆಯ ವರಗೆ ನಿಗದಿಪಡಿಸಲಾಗುತ್ತು ಅದರೆ ಸಭೆಗೆ ಸಂಘ 12 ಮಂದಿ ನಿರ್ದೇಶಕರು ಗೈರು ಹಾಜರಾದರು.
ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಚುನಾವಣಾಧಿಕಾರಿ ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ಎಸ್.ಎಸ್. ರವಿಕುಮಾರ್ ಮುಂದೂಡಿ ಮುಂದಿನ ಚುನಾವಣೆಯನ್ನು ಸೆ.11 ಸೋಮವಾರಕ್ಕೆ ನಿಗದಿ ಪಡಿಸಿದರು.