ಹುಣಸೂರು: ನಮ್ಮ ದುಡಿಮೆಯ ಅರ್ಧ ಪಾಲು ಸಮಾಜದ ಇಲ್ಲದವರಿಗೆ ಕೊಡುವ ಮೂಲಕ ಅವರ ಬದುಕಿಗೆ ನೆರವಾಗಬೇಕು ಎಂದು ರೋಟರಿ ಕ್ಲಬ್ ಮೆಟ್ರೋ ಬೆಂಗಳೂರು ಜಿಲ್ಲಾ ಛೇರ್ಮನ್ ಶ್ರೀ ನಿವಾಸ್ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಕಾಲೇಜಿನಲ್ಲಿ ರೋಟರಿ ಮೆಟ್ರೋ ಬೆಂಗಳೂರು, ರೋಟರಿ ಕ್ಲಬ್ ಹುಣಸೂರು ಇವರ ಸಂಯುಕ್ತಾಶ್ರಯದಲ್ಲಿ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮದಲ್ಲಿ ಕಾಲೇಜಿನ 250 ವಿದ್ಯಾರ್ಥಿಗಳಿಗೆ ತಲಾ ಎರಡು ತೆಂಗಿನ ಸಸಿ ವಿತರಿಸಿ ಮಾತನಾಡಿದ ಅವರು, ಕಲ್ಪವೃಕ್ಷ ಬದುಕಿನ ಅಂಗವಾಗಿದ್ದು, ಸಸಿಯನ್ನು ಪಡೆಯುವ ವಿದ್ಯಾರ್ಥಿಗಳು ಮನೆಯ ಅಂಗಳದಲ್ಲಿ ನೆಡುವುದರ ಜತೆಗೆ ನೀರೆರದು ಪೋಷಿಸಬೇಂಕೆದರು.
ಇನ್ನಾರ್ ವೀಲ್ ಅಧ್ಯಕ್ಷೆ ರೂಪ ಶ್ರೀನಿವಾಸ್ ಮಾತನಾಡಿ, ಇದೇ ಕಾಲೇಜಿನ ವಿದ್ಯಾರ್ಥಿಯಾದ ನನಗೆ ಇಂತಹ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದೆ. ನಮ್ಮ ಮುಂದೆ ಲಕ್ಷ ಕಲ್ಪವೃಕ್ಷದ ಜತೆಗೆ. ಕಾಮದೇನು ಪ್ರಾಜೇಕ್ಟ್ ಕೂಡ ಇದ್ದು , ಅರ್ಹ ಫಲಾನುಭವಿಗಳು ಇದ್ದರೆ ಉಚಿತವಾಗಿ ನೆರವಾಗಲಿದ್ದೇವೆ ಎಂದರು.
ರೋಟರಿ ಅಗ್ರಿಕಲ್ಚರ್ ಛೇರ್ಮನ್ ಶಿವಕುಮಾರ್ ಮಾತನಾಡಿ, ನಿಮ್ಮ ಕಾಲೇಜಿನಿಂದ ಮನವಿ ಬಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ತೆಂಗಿನ ಸಸಿಯ ಜತೆಗೆ ಎಲ್ಲಾ ಜಾತಿಯ ಹಣ್ಣು ಗಿಡಗಳನ್ನು ಉಚಿತವಾಗಿ ನಮ್ಮ ಮೆಟ್ರೋ ರೋಟರಿವತಿಯಿಂದ ನೀಡಲಾಗುವುದು ಎಂದರು.
ಹುಣಸೂರು ರೋಟರಿ ಅಧ್ಯಕ್ಷ ಪ್ರಸನ್ನ ಕೆ.ಪಿ.ಮಾತನಾಡಿ, ರೋಟರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ, ಶಿಕ್ಷಣ, ಧ್ಯೇಯ ಗುಣಗಳನ್ನು ಹೊಂದಿದ್ದು, 113 ದೇಶಗಳಲ್ಲಿ ರೋಟರಿ ಕ್ಲಬ್ ಗಳನ್ನು ಸ್ಥಾಪಿಸಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ವಿಶ್ವದ ಏಕೈಕ ಸಂಸ್ಥೆ ರೋಟರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟಿ ಮಾತನಾಡಿ, ರೋಟರಿ ಮೆಟ್ರೋ ಬೆಂಗಳೂರಿನ ರೋಟರಿ ಸದಸ್ಯರು ನಿಮಗೆ ನೀಡುತ್ತಿರುವ ತೆಂಗಿನ ಸಸಿಗಳನ್ನು ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಜಮೀನುಗಳಲ್ಲಿ ನೆಟ್ಟು ಪೋಷಿಸಬೇಕು. ಇದರೊಂದಿಗೆ ಪ್ರಕೃತಿಯ ಎಲ್ಲಾ ಗಿಡಮರಗಳನ್ನು ಪ್ರೀತಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಹೆಚ್.ಆರ್. ಕೃಷ್ಣಕುಮಾರ್, ಸಹಾಯಕ ಗೌರ್ನರ್ ಆನಂದ್ ಆರ್, ರೋಟರಿ ಹಿರಿಯ ಸದಸ್ಯ ಅಶೋಕ್ ಕುಮಾರ್,ರೊ. ಧರ್ಮಾಪುರ ಶ್ಯಾಮ್, ರೋಟರಿ ಮೆಟ್ರೋ ಸಂಸ್ಥಾಪಕ ಗಂಗಾಧರ್, ನಿಕಟ ಪೂರ್ವ ಅಧ್ಯಕ್ಷ ಶ್ಯಾನ್ಭೋಗ್, ರೊ. ವಿಜಯ ಕುಮಾರ್, ರೂಪ, ವಿಜಯ್ ಕುಮಾರ್, ರೊ.ಮಲ್ಲಿಕಾರ್ಜುನ್, ರೊ.ಗೌತಮ್, ರೊ.ಕುಮಾರ್ ರಾಜು, ರೊ.ಅಬೀಬ್ ಸೈಯದ್, ಹಾಗೂ ಕಾಲೇಜಿನ ಅಸಿಸ್ಟೆಂಟ್ ಪ್ರೊ. ಚಂದ್ರಶೇಖರ್, ಪ್ರಾಧ್ಯಾಪಕರಾದ ನಂಜುಂಡಸ್ವಾಮಿ, ಪ್ರತಿಭಾ ಜೆನಿಫರ್, ಸಿಡಿಸಿ ಮೆಂಬರ್ ನಾಗರಾಜ್ ಇದ್ದರು.