ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಅಧಿಕಾರ ಶಾಶ್ವತವಲ್ಲ. ಆದರೆ ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಅದು ಮಾತ್ರ ಶಾಶ್ವತವಾಗಿರಬಲ್ಲದು. ಹೀಗಾಗಿ ಈ ಸಂಕಲ್ಪದೊಂದಿಗೆ ನಾನು ಜನ ಸೇವೆ ಮಾಡುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು.
ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ತಮ್ಮ 72 ಲಕ್ಷ ರೂ. ಅನುದಾನ ಬಳಸಿ ನಿರ್ಮಿಸಲಾದ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಕಳಸಾರೋಹಣದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, ಕರಡಿಗುದ್ದಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 1.25 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ, ಪಶು ಆಸ್ಪತ್ರೆ, 4 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದರು.
ಅರಳಿಕಟ್ಟಿ ತೋಂಟದಾರ್ಯ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮೀಜಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಳರ್ ಅವರಂತಹ ಜನಪ್ರತಿನಿಧಿ ಸಿಗುವುದು ಕಷ್ಟ. ಅವರು ಈಗ ಇಡೀ ರಾಜ್ಯದ ಮನೆ ಮಗಳಾಗಿದ್ದು, 2028ರಲ್ಲಿ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವದಿಸಿದರು.
ಶಂಕರಗೌಡ ಪಾಟೀಲ, ಹಾಲಪ್ಪ ನೇಸರಗಿ, ಅಶೋಕ ಮೂಕನವರ, ಚನ್ನಬಸಪ್ಪ ರಾಚನ್ನವರ, ಗ್ರಾಪಂ ಅಧ್ಯಕ್ಷ ಪಾರ್ವತಿ ಅರಬಳ್ಳಿ. ಮೋಹನ ಬಡಿಗೇರ, ಗಿರಿಜಾ ಪಾಟೀಲ, ಸಂಜಯ ಚಾಟೆ, ಕಾಳಪ್ಪ ಗಾಡಿವಡ್ಡರ, ಸುರೇಶ ಪಡಗಣ್ಣವರ, ಇತರರಿದ್ದರು.