ಹೊಸೂರು: ಲಕ್ಷ್ಮೀಪುರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ರಾಗಿ ಮಣಿಲಾ ಮತ್ತು ಉಪಾಧ್ಯಕ್ಷರಾಗಿ ಭಾರತಿ ಆಯ್ಕೆ ಯಾದರು. ಸಾಲಿಗ್ರಾಮ ತಾಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆ ಗೆ ಮೀಸಲಾಗಿತ್ತು, ಗ್ರಾಮ ಪಂಚಾಯತಿ ಯಲ್ಲಿ ಒಟ್ಟು 17 ಸದಸ್ಯರು ಇದ್ದು ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಣಿಲಾ ಹಾಗೂ ರೂಪ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭಾರತಿ ಹಾಗೂ ರೂಪ ನಾಮಪತ್ರ ಸಲ್ಲಿಸಿದ್ದರು. ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಣಿಲಾ 14 ಮತಗಳನ್ನು ಪಡೆದರೆ ರೂಪ 3 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಭಾರತಿ 10 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ರೂಪ 7 ಮತಗಳನ್ನು ಪಡೆದು ಪರಾಭವ ಗೊಂಡರು.
ಒಂದೇ ಅಭ್ಯರ್ಥಿ ಯೂ ಎರಡು ಸ್ಥಾನಗಳಿಗೆ ಸ್ಪರ್ದಿಸಿ ಎರಡರಲ್ಲಿಯೂ ಸೋಲು ಅನುಭವಿಸಿದರು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಕಾರ್ಯ ನಿರ್ವಹಿಸಿದರು.
ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿ ಗಳು ಗೆಲುವು ಸಾಧಿಸಿದ್ದು ಶಾಸಕ ಡಿ ರವಿಶಂಕರ್ ಹಾಗೂ ದೊಡ್ಡಸ್ವಾಮಿಗೌಡ ರವರ ಮಾರ್ಗದರ್ಶನ ದಲ್ಲಿ ಅವರ ಸಲಹೆ ಸಹಕಾರ ಪಡೆದು ರಸ್ತೆ ಚರಂಡಿ ವಿದ್ಯುತ್ ಕುಡಿಯುವನೀರು ಸೇರಿದಂತೆ ಇನ್ನು ಹಲವು ಅಭಿವೃದ್ಧಿ ಗಳನ್ನು ಈ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸ ಲಾಗುವುದು ಎಂದು ನೂತನ ಅಧ್ಯಕ್ಷೆ ಮಣಿಲಾ ತಿಳಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷ ರನ್ನು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಸಣ್ಣಪ್ಪ ವಿ ಎಸ್ ಎಸ್ ಎನ್ ಅಧ್ಯಕ್ಷ ಲೋಕೇಶ್ ಉಪಾಧ್ಯಕ್ಷ ದೇವರಾಜ್ ಸೊಸೈಟಿ ರಾಮೇಗೌಡ ಪಟೇಲ್ ಶಿವಣ್ಣ ಚಿಕ್ಕೇಗೌಡ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಕೆಡಗ ಅಣ್ಣೇಗೌಡ ಮೂರ್ತಿ ಎಲ್ ಐ ಸಿ ರಾಮಣ್ಣ ಮತ್ತಿತರರು ಅಭಿನಂದಿಸಿದರು.
ಸದಸ್ಯರುಗಳಾದ ಹುಚ್ಚೇಗೌಡ ಕಾಳಮ್ಮ ಪಾಪಣ್ಣ ಕೃಷ್ಣೇಗೌಡ ನಾಗೇಂದ್ರ ಶಾಂತಮ್ಮ ಸುಂದ್ರಮ್ಮ ನಾಗರಾಜು ಭವಾನಿ ರಂಗೇಗೌಡ ಅನಿಲ್ ಗೌರಮ್ಮ ಪುಷ್ಪ ನಿತನ್ ಪಿಡಿಒ ರಂಗೇಗೌಡ ಕಾರ್ಯದರ್ಶಿ ಮಾದೇಗೌಡ ಹಾಜರಿದ್ದರು.