Friday, April 4, 2025
Google search engine

Homeರಾಜ್ಯಜನವರಿ 18 ರಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

ಜನವರಿ 18 ರಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ಪ್ರಯುಕ್ತ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಕುರಿತು ಮಾಹಿತಿ ನೀಡಿದ ಲಾಲ್​ಬಾಗ್ ​ನ ನಿರ್ದೇಶಕ ರಮೇಶ್ ಜನವರಿ 18 ರಿಂದ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫ್ಲವರ್ ಶೋವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಜಗಜ್ಯೋತಿ ಬಸವಣ್ಣನವರ ಜೀವನ ಆಧಾರಿತವಾದ ಫ್ಲವರ್ ಶೋ ಇರಲಿದ್ದು, ಅನುಭವ‌ಮಂಟಪ ಮುಖ್ಯ ಆಕರ್ಷಣೆಯಾಗಿದೆ. ಒಟ್ಟು 68 ಬಗೆಯ ಹೂಗಳು, 22 ವರ್ಣ ರಂಜಿತ ಹೂಗಳು ಇರಲಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 35 ಲಕ್ಷ ಹೂಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ‌ ಎಂದು ರಮೇಶ್ ತಿಳಿಸಿದರು.
ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪ್ರದರ್ಶನ ಇರಲಿದೆ. ಪ್ರತಿವರ್ಷದಂತೆ ಈ ವರ್ಷವು ವಿಶೇಷ ಫ್ಲವರ್ ಶೋ ‌ಆಯೋಜನೆ ಮಾಡಿದ್ದೇವೆ. ಈ ಫ್ಲವರ್ ಶೋ‌ ಮೂಲಕ‌ ಪರಿಸರವನ್ನು ಹೇಗೆ ಪ್ರೀತಿಸಬೇಕು ಅಂತ ಕಲಿಯಬಹುದು ಎಂದು ಹೇಳಿದರು.

ಫಲಪುಷ್ಪ ಪ್ರದರ್ಶನ ನೋಡಲು ಬರುವ ವಯಸ್ಕರಿಗೆ 80 ರೂಪಾಯಿ ಟಿಕೆಟ್ ದರ, ರಜೆ ದಿನಗಳಲ್ಲಿ ವಯಸ್ಕರಿಗೆ 100 ರೂಪಾಯಿ ಟಿಕೆಟ್ ದರ ಇರುತ್ತದೆ. ಮಕ್ಕಳಿಗೆ 30 ರೂ. ನಿಗದಿ ಮಾಡಿದ್ದೇವೆ. ಶಾಲಾ ಸಮವಸ್ತ್ರ ಧರಿಸಿಕೊಂಡು ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular