ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಲಾಳಂದೇವನಹಳ್ಳಿ ಗ್ರಾ.ಪಂ. ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಎಂ.ಡಿ.ದಾಕ್ಷಾಯಿಣಿ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ಪಾರ್ವತಮ್ಮ ಅವರ ರಾಜೀನಾಮೆಯಿಂದ ತೆರನಾಗಿದ್ದ ಸ್ಥಾನಕ್ಕೆ ಪಂಚಾಯಿತಿಯ ಆಡಳಿತ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ಬೆಂಬಲಿತರಾಗಿ
ಜಗದಾಂಭ ಮತ್ತು ಜೆಡಿಎಸ್ ಬೆಂಬಲಿತರಾಗಿ ಎಂ.ಡಿ.ದಾಕ್ಷಾಯಿಣಿ ನಾಮಪತ್ರ ಸಲ್ಲಿಸಿದ್ದರು.
ಆನಂತರ ನಡೆದ ಚುನಾವಣೆಯಲ್ಲಿ ೧೩ ಮತಗಳನ್ನು ಪಡೆದ ಎಂ.ಡಿ.ದಾಕ್ಷಾಯಿಣಿ, ೧೦ ಮತಗಳಿಸಿದ ಜಗದಾಂಭ ಅವರನ್ನು ೩ ಮತಗಳ ಅಂತರದಿoದ ಪರಾಭವಗೊಳಿಸಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪಂಚಾಯಿತಿ ಅಧಿಕಾರದ ಗದ್ದುಗೆಯನ್ನು ಜೆಡಿಎಸ್ ತೆಕ್ಕೆಗೆ ಸೆಳೆದು ಗೆಲುವಿನ ನಗೆ ಬೀರಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಸುಮಾಲೋಕೇಶ್, ಸದಸ್ಯರಾದ ಬಾಲಾಜಿಗಣೇಶ್, ಜಯಮ್ಮ, ಎಸ್.ಎಂ.ಯೋಗೇಶ್, ಎಸ್.ಆರ್.ವಸಂತ, ರಮೇಶ್, ಸುಕನ್ಯ, ಎಂ.ಸುನೀಲ್, ಪುಷ್ಪ, ಪಾರ್ವತಮ್ಮ, ಜಯಂತಿ, ಎಂ.ಟಿ.ಮಹೇಶ್, ಲೋಕೇಶ್, ಹೆಚ್.ಆರ್.ಶಿವಕುಮಾರ್, ಹೆಚ್.ಡಿ.ದ್ರಾಕ್ಷಾಯಿಣಿ, ಎ.ಚೌರಪ್ಪ, ವಿಮಲಜಯಣ್ಣ, ಎಲ್.ಪಿ.ಉಮೇಶ್, ಎಲ್.ಎಸ್.ಗುರು, ಜಯಶೀಲ, ಸಂಪತ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸವಿತಾ, ಕಾರ್ಯದರ್ಶಿ ಧನಂಜಯ್ ಇದ್ದರು.
ನೂತನ ಅಧ್ಯಕ್ಷರನ್ನು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷೆ ಕವಿತಾರವಿ, ಪುರಸಭೆ ಸದಸ್ಯ ಉಮೇಶ್, ಗ್ರಾ.ಪಂ.
ಮಾಜಿ ಸದಸ್ಯರಾದ ಗಣೇಶ್, ಹೊಸಹಳ್ಳಿಪುಟ್ಟರಾಜು, ಶಂಕರ್ ಮತ್ತಿತರರು ಅಭಿನಂದಿಸಿದರು.