Monday, April 14, 2025
Google search engine

Homeಅಪರಾಧಜಮೀನು ವಿವಾದ: ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಇಬ್ಬರು ಸಹೋದರರು ಸಾವು

ಜಮೀನು ವಿವಾದ: ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಇಬ್ಬರು ಸಹೋದರರು ಸಾವು

ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿಯಲ್ಲಿ ನಡೆದಿದೆ.

ಹನುಮಂತ ಖೋತ (34) ಹಾಗೂ ಖಂಡೋಬಾ ಖೋತ (32) ಮೃತಪಟ್ಟ ದುರ್ದೈವಿಗಳು.

ಕಳೆದ ಹಲವಾರು ವರ್ಷಗಳಿಂದ ಈ ಇಬ್ಬರು ಸಹೋದರರ ನಡುವೆ ಜಮೀನು ವಿವಾದ ಇತ್ತು ಎನ್ನಲಾಗಿದೆ ಅಲ್ಲದೆ ವಿವಾದ ಬಗೆಹರಿಸಲು ರಾಜಿ ಸಂಧಾನ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ.

ಈ ನಡುವೆ ಮತ್ತೆ ಇಬ್ಬರು ಸಹೋದರರ ಮಧ್ಯೆ ಜಗಳ ನಡೆದು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡು ಗಂಭೀರ ಗಾಯಗೊಂಡಿದ್ದರು, ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಹೋದರರು ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular