ಹೊಸದಿಲ್ಲಿ: ಸರ್ಕಾರಿ ಉದ್ಯೋಗ ನೀಡಲು ಲಂಚ ಪಡೆದಿದ್ದ ಬಹುಕೋಟಿ ರೂ. ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿದೇವಿಗೆ ಮಧ್ಯಂತರ ಜಾಮೀನು ದೊರೆತಿದೆ. ಫೆಬ್ರವರಿ ೨೮ರವರೆಗೆ ದಿಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ರಾಬ್ರಿ ದೇವಿ ಹಾಗೂ ಅವರ ಇಬ್ಬರು ಪುತ್ರಿಯರ ಸಾಮಾನ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತನಗೆ ಕಾಲಾವಕಾಶ ಬೇಕು ಎಂದು ಜಾರಿ ನಿರ್ದೇಶನಾಲಯವು ಮನವಿ ಮಾಡಿದ್ದರಿಂದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಮೂವರಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ಆರೋಪಿಗಳನ್ನು ತನಿಖೆಯ ಸಂದರ್ಭದಲ್ಲಿ ಬಂಧಿಸದೆ ಇರುವಾಗ, ಈಗೇಕೆ ಆರೋಪಿಗಳನ್ನು ವಶಕ್ಕೆ ಕೇಳುತ್ತಿದ್ದೀರಿ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು. ಕೊನೆಗೆ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು.