Friday, April 18, 2025
Google search engine

Homeಅಪರಾಧಕೇದಾರನಾಥ ಯಾತ್ರೆಯಲ್ಲಿ ಭೂಕುಸಿತ: ೩ ಸಾವು, ೮ ಮಂದಿಗೆ ಗಾಯ

ಕೇದಾರನಾಥ ಯಾತ್ರೆಯಲ್ಲಿ ಭೂಕುಸಿತ: ೩ ಸಾವು, ೮ ಮಂದಿಗೆ ಗಾಯ

ನವದೆಹಲಿ: ಇಂದು ಭಾನುವಾರ ಬೆಳಿಗ್ಗೆ ಕೇದಾರನಾಥ ದೇವಾಲಯಕ್ಕೆ ಹೋಗುವಾಗ ಭೂಕುಸಿತದಲ್ಲಿ ಸಿಲುಕಿ ಮೂವರು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ.

ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಪ್ರಕಾರ, ಯಾತ್ರಾರ್ಥಿಗಳು ಗೌರಿಕುಂಡದಿಂದ ಮುಂಜಾನೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಗೌರಿಕುಂಡ್-ಕೇದಾರನಾಥ ಚಾರಣ ಮಾರ್ಗದ ಚಿರ್ಬಾಸಾ ಪ್ರದೇಶದ ಬಳಿ ಭಾರಿ ಭೂಕುಸಿತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಬದುಕುಳಿದವರಿಗೆ ಸಹಾಯ ಮಾಡಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರಲ್ಲಿ ಇಬ್ಬರು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದರೆ, ಒಬ್ಬರು ಉತ್ತರಾಖಂಡದ ರುದ್ರಪ್ರಯಾದ್ ಮೂಲದವರು. ಮೃತರನ್ನು ಕಿಶೋರ್ ಅರುಣ್ ಪರಟೆ (೩೧) ಮಹಾರಾಷ್ಟ್ರದ ಜಲ್ನಾದ ಸುನಿಲ್ ಮಹಾದೇವ್ ಕಾಳೆ (೨೪) . ರುದ್ರಪ್ರಯಾಗದ ತಿಲ್ವಾರಾದ ಅನುರಾಗ್ ಬಿಶ್ತ್ ಎಂದು ಗುರುತಿಸಲಾಗಿದೆ.ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular