Saturday, April 19, 2025
Google search engine

Homeಅಪರಾಧಶಿರೂರು ಭೂಕುಸಿತ: ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

ಶಿರೂರು ಭೂಕುಸಿತ: ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

ಕೋಯಿಕ್ಕೋಡ್: ಶಿರೂರು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಅವರ ಸ್ವಗ್ರಾಮವಾದ ಕನ್ನಡಿಕ್ಕಲ್ ನಲ್ಲಿ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು.

ಚಾಲಕ ಅರ್ಜುನ್ ಕಳೇಬರವನ್ನು ಹೊತ್ತ ಆಂಬುಲೆನ್ಸ್ ಕನ್ನಡಿಕ್ಕಲ್ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೆ ಗ್ರಾಮಸ್ಥರು, ಅರ್ಜುನ್ ಸ್ನೇಹಿತರು, ನೆರೆಹೊರೆಯವರು ಹಾಗೂ ಚಾಲಕರು ದುಃಖತಪ್ತರಾದರು. ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಅರ್ಜುನ್ ಹಾಗೂ ಅವರು ಚಲಾಯಿಸುತ್ತಿದ್ದ ಲಾರಿ ನಾಪತ್ತೆಯಾಗಿತ್ತು. ಬುಧವಾರ ಅರ್ಜುನ್ ಮೃತದೇಹ ಪತ್ತೆಯಾಗಿತ್ತು.

ಅರ್ಜುನ್ ಮೃತದೇಹದ ಪತ್ತೆಯೊಂದಿಗೆ ಶಿರೂರು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

RELATED ARTICLES
- Advertisment -
Google search engine

Most Popular