Friday, April 18, 2025
Google search engine

Homeವಿದೇಶಚೀನಾದಲ್ಲಿ ಭೂ ಕುಸಿತ: 44 ಜನರು ಜನರು ಸಾವು, 18 ಮನೆಗಳು ಸಂಪೂರ್ಣ ನಾಶ

ಚೀನಾದಲ್ಲಿ ಭೂ ಕುಸಿತ: 44 ಜನರು ಜನರು ಸಾವು, 18 ಮನೆಗಳು ಸಂಪೂರ್ಣ ನಾಶ

ಚೀನಾ: ನೈಋತ್ಯ ಪ್ರಾಂತ್ಯದ ಗೈಝೌನ ಜೆಂಕ್ಯಾಂಗ್ ಕೌಂಟಿಯಲ್ಲಿ ಸೋಮವಾರ ಮುಂಜಾನೆ 5.51 ಕ್ಕೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಕನಿಷ್ಠ 44 ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. 18 ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ, ಅವಶೇಷಗಳ ಅಡಿಯಲ್ಲಿ ಹುದುಗಿರುವ ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ರಕ್ಷಣಾ ತಂಡಗಳು ಅವಶೇಷಗಳನ್ನು ತೆಗೆದುಹಾಕಲು ಹಗಲಿರುಳು ಶ್ರಮಿಸುತ್ತಿವೆ ಮತ್ತು ಕೆಲವರನ್ನು ಜೀವಂತವಾಗಿ ರಕ್ಷಿಸಬಹುದು ಎಂದು ನಂಬಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಮಣ್ಣು ಮೆತ್ತಗಾಗಿದ್ದು ಭೂಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

RELATED ARTICLES
- Advertisment -
Google search engine

Most Popular