Thursday, April 3, 2025
Google search engine

Homeದೇಶಪಪುವಾ ನ್ಯೂಗಿನಿಯಲ್ಲಿ ಭೂ ಕುಸಿತ: ೧೦೦ ಮಂದಿ ಮೃತ

ಪಪುವಾ ನ್ಯೂಗಿನಿಯಲ್ಲಿ ಭೂ ಕುಸಿತ: ೧೦೦ ಮಂದಿ ಮೃತ

ಮೆಲ್ಬರ್ನ್: ಪಪುವಾ ನ್ಯೂಗಿನಿಯಲ್ಲಿ ಇಂದು ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಟ್ರೇಲಿಯಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ವರದಿ ಮಾಡಿದೆ.

ಎಂಗಾ ಪ್ರಾಂತ್ಯದ ಕಾವೊಕಲಮ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ೩ಕ್ಕೆ ಭೂ ಕುಸಿತ ಸಂಭವಿಸಿದೆ. ದಕ್ಷಿಣ ಪೆಸಿಫಿಕ್ನ ದ್ವೀಪ ರಾಷ್ಟ್ರವಾಗಿರುವ ಪಪುವಾ ನ್ಯೂಗಿನಿಯ ರಾಜಧಾನಿ ಪೋರ್ಟ್ ಮೊರೆಸ್ಬಿಯಿಂದ ಸುಮಾರು ೬೦೦ ಕಿ.ಮೀ ದೂರದಲ್ಲಿ ಈ ಪ್ರಾಂತ್ಯ ಇದೆ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ಅಲ್ಲಿನ ನಿವಾಸಿಗಳು ಹೇಳೀದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಖಚಿತಪಡಿಸಿಲ್ಲ. ನೆಲದಲ್ಲಿ ಹೂತುಹೋಗಿರುವ ಶವಗಳನ್ನು ಜನರು ಹೊರತೆಗೆಯುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

RELATED ARTICLES
- Advertisment -
Google search engine

Most Popular