ಚಾಮರಾಜನಗರ: ಭಾಷಾ ಸಂಬಂಧವು, ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿದ್ದು, ಹೃದಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಭಾಷಾ ಸಂಬಂಧ ವಿಶ್ವವನ್ನೇ ಒಂದುಗೂಡಿಸುತ್ತದೆ ಎಂದು ಸಂಸ್ಕೃತಿ ಚಿಂತಕ , ತಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಮತ್ತು ಜಿಲ್ಲಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 50 ದಿನಗಳ ನಿರಂತರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರರಂಗದ ದಿಗ್ಗಜರ ಕುರಿತು ಮಾತನಾಡುತ್ತಾ ಚಿತ್ರರಂಗದ ಡಾ. ರಾಜ್‌ಕುಮಾರ್ ವಿಷ್ಣುವರ್ಧನ್ , ಅಂಬರೀಶ್ ಶಂಕರ್ ನಾಗ್ ,ಉದಯ್ ಕುಮಾರ್ , ನರಸಿಂಹರಾಜು ಪುನೀತ್ ರಾಜಕುಮಾರ್ ಹಾಗು ಇನ್ನಿತರರನ್ನು ಸ್ಮರಿಸುತ್ತ ಕನ್ನಡ ಚಲನಚಿತ್ರ ರಂಗಕ್ಕೆ ನೂರಾರು ನಾಯಕ ನಟರ ಕೊಡುಗೆ ಇದೆ . ಕನ್ನಡ ಚಿತ್ರರಂಗ ಬರಿ ಕನ್ನಡ ಮಾತ್ರವಲ್ಲದೆ, ಸಂಸ್ಕೃತಿ ,ಪರಂಪರೆ ನಾಡು, ನುಡಿ ,ಜಲ, ಭಾಷೆ ,ಪ್ರಕೃತಿ ಬೆಟ್ಟಗುಡ್ಡ ,ಊರು ,ಪ್ರದೇಶಗಳನ್ನು ತನ್ನ ಚಿತ್ರಗಳ ಮೂಲಕ ಬಿಂಬಿಸಿ ಸಾವಿರಾರು ಅಗೋಚರ ಸ್ಥಳಗಳು ಪ್ರವಾಸೋದ್ಯಮಕ್ಕೆ ಮುಖ್ಯ ದಾರಿಯಾಗಿದೆ .
ಪ್ರಕೃತಿಯನ್ನು ಬೆಟ್ಟಗುಡ್ಡಗಳನ್ನು, ಅರಣ್ಯಗಳನ್ನು ಪ್ರಾಣಿಗಳ ಜೀವಸಂಕುಲದ ಕಥೆಗಳ ರೂಪದಲ್ಲಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಕನ್ನಡ ಚಲನಚಿತ್ರರಂಗದ ದಿಗ್ಗಜರು ಕನ್ನಡ ಭಾಷೆಯ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ . ಪ್ರತಿ ನಟನೆ ಮಾತಿನ ಹಾಡುಗಳ ಮೂಲಕ ಕನ್ನಡ ಸಾಹಿತ್ಯದ ಮೂಲಕವಿಗಳ ಚಿಂತನೆ ಬೆಳಕಿಗೆ ಬರುವ ಮೂಲಕ ಕನ್ನಡಿಗರಿಗೆ ಮತ್ತು ಭಾಷೆಗೆ ಮೌಲ್ಯವನ್ನು ,ವಿಶ್ವ ಪ್ರಸಿದ್ಧಿಯನ್ನು ತಂದುಕೊಟ್ಟದ್ದು ಕನ್ನಡ ಚಿತ್ರರಂಗವೆಂದರು. ಕನ್ನಡ ಚಲನಚಿತ್ರ ರಂಗದ ದಿಗ್ಗಜರ ಕೊಡುಗೆಗೆ ಅಪಾರ ಶಕ್ತಿ ಇದೆ. ಕನ್ನಡಿಗರನ್ನು ಒಂದುಗೂಡಿಸಿರುವ ಕನ್ನಡ ಭಾಷೆಗೆ ಮತ್ತು ನಟರಿಗೆ ಯಾವುದೇ ಜಾತಿ ಧರ್ಮ ಇಲ್ಲ ಭಾಷೆಯೇ ಹೃದಯ ಸಂಬಂಧವನ್ನು ಮೂಡಿಸಿ ಗಟ್ಟಿಗೊಳಿಸುತ್ತದೆ, ಭಾಷಾಭಿಮಾನಿಗಳು ಒಂದುಗೂಡುತ್ತಾರೆ .ಜಾತಿ ಧರ್ಮದ ಭೇದವಿಲ್ಲದೆ ಭಾಷೆ ಉಳಿಸುತ್ತಿರುವ ಎಲ್ಲಾ ಕನ್ನಡಿಗರಿಗೂ ನಮನಗಳನ್ನು ಸಲ್ಲಿಸಬೇಕು .ಪ್ರತಿದಿನ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಪ್ರಾರ್ಥನೆ ಸಲ್ಲಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ಮಾತನಾಡಿ ಕನ್ನಡ ಚಲನಚಿತ್ರರಂಗ ಶತಮಾನದ ಹೊಸಲಿನಲ್ಲಿ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ, ಚಲನಚಿತ್ರ ಮಂದಿರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ ,ಕನ್ನಡ ಭಾಷೆ ಕನ್ನಡದ ಚಿತ್ರರಂಗ ,ಕನ್ನಡಿಗರ ಅಸ್ಮಿತೆಯಾಗಿರುವ ಚಿತ್ರರಂಗಗಳು ಚಿತ್ರಮಂದಿರಗಳು ಬೆಳೆಸಬೇಕು ಕನ್ನಡಿಗರು ಚಿಂತನೆ ನಡೆಸಬೇಕಿದೆ. ಕನ್ನಡದ ನಟ ನಟಿಯರ ಮೂಲಕ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗಿದೆ. ಸಂತೋಷ ಮನೋರಂಜನೆ ಮೂಲಕ ಚಿತ್ರರಂಗ ಮನುಷ್ಯನನ್ನು ಸಂತೋಷಪಡಿಸಿದರೆ, ಭಾಷೆಯ ಪ್ರಯೋಗ, ಶಬ್ದದ ಚಿಂತನೆ ಮೂಲ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ ಶಾಮುರಳಿ , ರಾಜ್ ಗೋಪಾಲ್, ಪಣ್ಯದ ಹುಂಡಿ ರಾಜು , ಲಕ್ಷ್ಮೀ ನರಸಿಂಹ, ಲಿಂಗರಾಜು ,ಮೂರ್ತಿ, ಮಹೇಶ್ ಗೌಡ ,ಸೋಮಣ್ಣ ಲಿಂಗಣ್ಣ,ಪದ್ಮಾ ಪುರುಷೋತ್ತಮ ಮುಂತಾದವರು ಇದ್ದರು.