ಮೈಸೂರು : ನಗರದ ವಿವಿಧೆಡೆ ಲ್ಯಾಪ್‌ಟಾಪ್ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಹೆಬ್ಬಾಳ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಆತನಿಂದ ೨.೨೨ ಲಕ್ಷ ರೂ ಮೌಲ್ಯದ ೭ ಲ್ಯಾಪ್‌ಟಾಪ್, ೨ಮೊಬೈಲ್ ಫೋನ್ ಹಾಗೂ ೨ಸಾವಿರ ನಗರದ ದಸ್ತಗಿರಿ ಮಾಡಿದ್ದಾರೆ.
ಆರೋಪಿ ಹೆಬ್ಬಾಳ್ ವ್ಯಾಪ್ತಿಯ ಕೆಐಎಡಿಬಿ ಬಡಾವಣೆಯಲ್ಲಿರುವ ಈಜಿ ಲಿವಿಂಗ್ ಪಿ.ಜಿ ರೂಂಗಳಲ್ಲಿ ಹಾಗೂ ಮಾದೇಗೌಡ ವೃತ್ತದ ೫ನೇ ಕ್ರಾಸ್‌ನ ಮನೆಯೊಂದರಲ್ಲಿ ಮತ್ತು ಹೆಬ್ಬಾಳ್ ೧ನೇ ಹಂತದ ಅಪೂರ್ವ ಬಾರ್ ಪಕ್ಕದ ೮ನೇ ಕ್ರಾಸ್‌ನ ಮನೆಯೊಂದರಲ್ಲಿ ಒಟ್ಟು ೭ ಲ್ಯಾಪ್‌ಟಾಪ್, ೩ ಮೊಬೈಲ್‌ಗಳನ್ನು ಕಳವು ಮಾಡಿದ್ದನು ಎನ್ನಲಾಗಿದೆ.
ಈತನ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಜೂನ್ ೬ ರಂದು ಮೈಸೂರು ಗ್ರಾಮಾಂತರ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈತ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಜೊತೆ ಐಟಿ ಉದ್ಯೋಗಿಗಳು ವಾಸವಿರುವ ಪಿ.ಜಿಗಳು, ಮನೆಗಳಲ್ಲಿ ಬೆಳಗ್ಗಿನ ವೇಳೆ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದುದ್ದಾಗಿ
ಒಪ್ಪಿಕೊಂಡಿದ್ದಾನೆ.