ಹುಣಸೂರು: ನಾಲ್ಕನೇ ಆಷಾಢ ಮಾಸದ ಕೊನೆವಾರ ತಾಯಿ ಮುತ್ತುಮಾರಮ್ಮನಿಗೆ ವಿಶೇಷವಾಗಿ ತೆಂಗಿನಕಾಯಿ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ನಗರದ ಶ್ರೀ ಮುತ್ತುಮಾರಮ್ಮನ ದೇವಿಗೆ ಆಷಾಢ ಮಾಸದ ಎಲ್ಲಾ ವಾರವೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮೂರನೇ ವಾರ ಸುಮಾರು ಐದು ಸಾವಿರ ತಿರುಪತಿ ಲಾಡಿನ ಶೈಲಿಯಲ್ಲಿ ಪ್ರತಿ ಭಕ್ತರಿಗೂ ಲಾಡು ನೀಡಲಾಗಿತ್ತು. ಈ ವಾರವು ಮುಕ್ಕಣ್ಣೇಶ್ವೆರನ ಮೂಲಕ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಕೊನೆಯ ವಾರವಾದ ಕಾರಣ ಬಂದ ಭಕ್ತಾಧಿಗಳಿಗೆ ಕೇಸರಿ ಬಾತ್ , ರೈಸ್ ಬಾತ್ ನೀಡಲಾಯಿತು. ತಾಯಿಗೆ ತುಪ್ಪದ ದೀಪ ಹಚ್ಚಿ ಮಹಿಳಾ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ಅಧ್ಯಕ್ಷರಾದ ಹೆಚ್.ವೈ. ಮಹದೇವ್, ಕಾರ್ಯದರ್ಶಿ ಈಶ್ವರ್, ಜಂಟಿ ಕಾರ್ಯದರ್ಶಿ ಅಶೋಕ್ ರಾಜಲಿಂಗಯ್ಯ, ಖಜಾಂಚಿ ಗುಂಡುಮಣಿ, ನಿರ್ದೇಶಕರಾದ ನರಸಿಂಹಯ್ಯ, ಪ್ರಕಾಶ್, ಶ್ರೀನಿವಾಸ್, ಗಿರೀಶ್ ಕುಮಾರ್, ಶ್ಯಾಮ್, ಕುಮಾರ್, ಇದ್ದರು.