ಮಂಗಳೂರು (ದಕ್ಷಿಣ ಕನ್ನಡ): ಸೆಪ್ಟೆಂಬರ್ ತಿಂಗಳನ್ನು ಅಲ್ಝೈಮರ್ ತಿಂಗಳು ಎಂದು ಆಚರಿಸಲಾಗುತ್ತಿದ್ದು, ಸೆಪ್ಟೆಂಬರ್ 1ರಂದು ಸಂಜೆ 7.30ಕ್ಕೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಪೇಜ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುವ ಅಲ್ಝೈಮರ್ ತಿಂಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ’ ಎಂದು ಪೇಜ್ ಸಂಸ್ಥೆಯ ಅಧ್ಯಕ್ಷ ರಘುವೀರ್ ಸಿ. ಹೇಳಿದರು. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ
ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಝೈಮರ್ ಮೆದುಳಿನ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದ್ದು, ವ್ಯಕ್ತಿಯ ಸ್ಮರಣಶಕ್ತಿ, ಆಲೋಚನೆ, ನಡವಳಿಕೆ ಮತ್ತು ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಪಂಚದಲ್ಲಿ 5.5 ಕೋಟಿ ಜನರು ಈ ಕಾಯಿಲೆಗೆ ತುತ್ತಾಗಿದ್ದು, ಭಾರತದಲ್ಲಿ 70 ಲಕ್ಷ ಜನರಿಗೆ ಈ ಕಾಯಿಲೆಯಿದೆ. ಈ ಕಾಯಿಲೆಯ ಬಗ್ಗೆ ಅರಿವು ಮೂಡಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ, ಲಯನ್ಸ್ ಕ್ಲಬ್, ರೋಟರ್‍ಯಾಕ್ಟ್ ಕ್ಲಬ್, ಇಂಟರ್‍ಯಾಕ್ಟ್ ಕ್ಲಬ್ ಸಹಕಾರ ನೀಡಿವೆ’ ಎಂದರು.