Friday, January 16, 2026
Google search engine

Homeಸ್ಥಳೀಯಪರಿಸರ ಸ್ನೇಹಿ 'ಇಕೋ-ವೀಲ್ಸ್'ಗೆ ಚಾಲನೆ

ಪರಿಸರ ಸ್ನೇಹಿ ‘ಇಕೋ-ವೀಲ್ಸ್’ಗೆ ಚಾಲನೆ

ಮೈಸೂರು: ಜಾಗತಿಕ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್ ಕಳೆದ ಮೂರು ದಶಕಗಳಿಂದ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತಿರುವ ಬೆಂಗಳೂರಿನ “ಶಿಶು ಮಂದಿರ” ಹಾಗೂ ಮೈಸೂರಿನ “ನಾವಿಯೋ ಟ್ರಸ್ಟ್” ಸಹಯೋಗದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ “ಇಕೋ-ವೀಲ್ಸ್” ಮಹಿಳಾ ಸಬಲೀಕರಣ ಯೋಜನೆಗೆ ಚಾಲನೆ ನೀಡಿತು.ಈ ಮಹತ್ವದ ಯೋಜನೆಯಡಿ ಮೈಸೂರಿನ 75 ಮಹಿಳೆಯರಿಗೆ ಎಲೆಕ್ನಿಕ್ ಆಟೋಗಳನ್ನು ವಿತರಿಸುವ ಮೂಲಕ ಅವರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲಾಯಿತು. ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದೇ ಸಂದರ್ಭದಲ್ಲಿ ಮಹಿಳೆಯರನ್ನು ಹಸಿರು ಸಾರಿಗೆಯ ರಾಯಭಾರಿಗಳನ್ನಾಗಿ ಬಿಂಬಿಸುವ ವರ್ಷಪೂರ್ತಿ ನಡೆಯಲಿರುವ “ಹಸಿರು ಮೈಸೂರು, ಸ್ವಚ್ಛ ಮೈಸೂರು” ಅಭಿಯಾನಕ್ಕೂ ಚಾಲನೆ ನೀಡಲಾಯಿತು.

ಶಾಸಕ ಟಿ.ಎನ್.ಶ್ರೀವತ್ಸ ಮಾತನಾಡಿ, “ಮಹಿಳೆಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಮತ್ತು ನಗರದ ಹಸಿರು ನಾರಿಗೆ ವ್ಯವಸ್ಥೆಗೆ ಕೊಡುಗೆ ನೀಡಲು ಇಕೋ-ವೀಲ್ಸ್ ಯೋಜನೆ ಉತ್ತಮ ವೇದಿಕೆ ಸಮಾನತೆ ಮತ್ತು ಸಾಮಾಜಿಕ ಪ್ರಗತಿ ಪ್ರತಿಪಾದಿಸುವ ಇಂತಹ ಕಾರ್ಯಗಳಿಗೆ ಮೈಸೂರು ಸದಾ ಬೆಂಬಲ ನೀಡುತ್ತದೆ.” ಎಂದರು.

ಹರ್ಬಲೈಫ್‌ನ ಉಪಾಧ್ಯಕ್ಷ ಉದಯ್ ಪ್ರಕಾಶ್ ಮಾತನಾಡಿ, ನುಸ್ತಿದ ಪ್ರಗತಿ ಮತ್ತು ಸಮುದಾಯದ ಏಳಿಗೆಗೆ ಹರ್ಬಲೈಫ್ ಬದ್ಧವಾಗಿದೆ. ಬೆಂಗಳೂರಿನ ಯಶಸ್ಸಿನ ನಂತರ ಮೈಸೂರಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಸಂತಸ ತಂದಿದೆ. ಇದು ಕೇವಲ ಮಹಿಳೆಯರಿಗೆ ಆಟೋ ನೀಡುವ ಯೋಜನೆಯಲ್ಲ, ಬದಲಾಗಿ ಅವರ ಕುಟುಂಬ ಮತ್ತು ಸಮುದಾಯವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವ ಪ್ರಯತ್ನವಾಗಿದೆ,” ಎಂದು ಹೇಳಿದರು.

ಶಿಶು ಮಂದಿರದ ನಿರ್ದೇಶಕ ಸಿ.ಆನಂದ್ ಮಾತನಾಡಿ, ‘ಮೂರು ದಶಕಗಳಿಂದ ನಾವು ಗೌರವಯುತ ಜೀವನೋಪಾಯ ಮಾರ್ಗ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ಇಕೋ-ವೀಲ್ಸ್ ಕೇವಲ ಒಂದು ಯೋಜನೆಯಲ್ಲ, ಇದೊಂದು ಆತ್ಮವಿಶ್ವಾಸದ ಅಂದೋಲನ. ಮೈಸೂರಿನಲ್ಲಿ ಹೆಚ್ಚಿನ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಇದು ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟರು. ಸಾವಿಯೋ ಟ್ರಸ್ಟ್ ಸಂಸ್ಥಾಪಕ ವಿಜಯ್ ಮಾತನಾಡಿದರು.

RELATED ARTICLES
- Advertisment -
Google search engine

Most Popular